Belagavi News In Kannada | News Belgaum

ಟ್ರಾಫಿಕ್ ಕಂಟ್ರೋಲ್‌ಗೆ ಇಂದಿನಿಂದ ಡ್ರೋನ್ ಕ್ಯಾಮರಾಗಳ ಹಾರಾಟ ಪ್ರಾಯೋಗಿಕ..

ಬೆಂಗಳೂರು: ಬೆಂಗಳೂರು ನಗರದ ವಿಪರೀತ ಸಂಚಾರ ದಟ್ಟಣೆಯನ್ನು ಶತಾಯಗತಾಯ ಕಡಿಮೆ‌ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಣ ತೊಟ್ಟಿರುವ ಸಂಚಾರಿ ಪೊಲೀಸರು ಡ್ರೋನ್ ಕ್ಯಾಮರಾಗಳ ಮೊರೆ ಹೋಗಿದ್ದಾರೆ..

ಜನಸಂದಣಿ‌ ಹಾಗೂ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಪ್ರಮುಖವಾಗಿ ಪೀಕ್​ ಅವರ್‌ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಡ್ರೋನ್ ಕ್ಯಾಮರ ಬಳಸಲು ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ಇಂದಿನಿಂದಲೇ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ..

ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹೆಬ್ಬಾಳ, ಗೊರಗುಂಟೆಪಾಳ್ಯ, ಟಿನ್ ಫ್ಯಾಕ್ಟರಿ ಬಿಡ್ಜ್, ಬನಶಂಕರಿ, ಸಾರಕ್ಕಿ ಜಂಕ್ಷನ್, ಇಬ್ಬಲೂರು ಹಾಗೂ ಟ್ರಿನಿಟಿ ವೃತ್ತ ಸೇರಿದಂತೆ 20 ಹೆಚ್ಚು ಜಂಕ್ಷನ್​ಗಳನ್ನು ಗುರುತಿಸಲಾಗಿದೆ. ಸೇಫ್ ಸಿಟಿ ಯೋಜನೆಯಡಿ ಈಗಾಗಲೇ ಎಂಟು ಡ್ರೋನ್ ಕ್ಯಾಮರಾ ಖರೀದಿಸಲಾಗಿದೆ‌..

ಈ ಪೈಕಿ 4 ಡ್ರೋನ್​ಗಳು ಸಂಚಾರ ವಿಭಾಗಕ್ಕೆ ಹಂಚಿಕೆಯಾಗಿದೆ. ಎಲ್ಲೆಲ್ಲಿ ಸಂಚಾರ ದಟ್ಟಣೆಯಾಗಲಿದೆಯೋ ಅಂತಹ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾ ಬಳಕೆಯಿಂದ ಎಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಲಿದೆ ಎಂಬುದರ ಬಗ್ಗೆ ಗೊತ್ತಾಗಲಿದೆ..

ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಪೊಲೀಸರಿಗೆ ಗೊತ್ತಾಗುವುದಿಲ್ಲ. ಡ್ರೋನ್ ಕ್ಯಾಮರಾ ಬಳಕೆಯಿಂದ ಎಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿರುವ ಬಗ್ಗೆ ಮಾಹಿತಿ ಗೊತ್ತಾಗಲಿದೆ..

ಇದೇ ಮಾಹಿತಿಯನ್ನು ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಕಳುಹಿಸಲಾಗುತ್ತದೆ. ಅಲ್ಲಿಂದ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ಪಡೆದು ಟ್ರಾಫಿಕ್ ಡೈವರ್ಷನ್​ ಮಾಡಲಾಗುತ್ತದೆ. ಡ್ರೋನ್ ಬಳಕೆ ಬಗ್ಗೆ ಟ್ರಾಫಿಕ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ನಗರ ಸಂಚಾರ ವಿಭಾಗ ಡಿಐಜಿ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ..