ಹನಿ ಟ್ಯ್ರಾಪ್ ಹೆಸರಿನಲ್ಲಿ ನನ್ನ ವಿರುದ್ಧ ಸುಳ್ಳು ದೂರು ದಾಖಲು ಪೊಲೀಸರ ತನಿಕೆಯಿಂದ ಬಯಲು ನ್ಯಾಯಾಲಯಕ್ಕೆ ವರದಿ ಪೊಲೀಸರು ಸಲ್ಲಿಕೆ : ನವ್ಯಾಶ್ರೀ

ಬೆಳಗಾವಿ :ನನ್ನ ವಿರುದ್ಧ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ರಾಜಕುಮಾರ್ ಟಾಕಳೆ ಹನಿ ಟ್ಯ್ರಾಪ್ ಹೆಸರಿನಲ್ಲಿ ಸುಳ್ಳುದೂರು ದಾಖಲು ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಿಸ್ಕೃತ ತನಿಖೆ ನಡೆಸಿ, ಯಾವುದೇ ಸಾಕ್ಷಾಧಾರಗಳು ಲಭ್ಯವಾಗದ ಕಾರಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎಂದು ನವ್ಯಾಶ್ರೀ ಹೇಳಿದರು.
ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ದ ಪ್ರಕರಣ ದಾಖಲಾದ ಸಂದರ್ಭದಲ್ಲಿ ಕೆಲ ಮಾದ್ಯಮದಲ್ಲಿ ನಾನು ಹನಿಟ್ರಾಪ್ ಮಾಡಿಯೇಬಿಟ್ಟಿದ್ದೇನೆಂದು ನಿರ್ಧರಿಸಿದ್ದವು. ಅದನ್ನೆ ವರದಿಯಾಗಿಟ್ಟುಕೊಂಡು ಎಪಿಎಂಸಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ ಎಂದರು.
ನನ್ನ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಹನಿ ಟ್ರ್ಯಾಪ್ ಮಾಡಿರುವ ಆರೋಪ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೆ. ಆದರೆ ಪೊಲೀಸರು ಜೂ.7 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ನಾನೂ ಈಗ ನಿರ್ದೂಷಿ, ಹನಿ ಟ್ರ್ಯಾಪ್ ಮಾಡಿಲ್ಲ ಎಂದು ವರದಿ ಸಲ್ಲಿಕೆ ಮಾಡಿದೆ ಎಂದರು.