Belagavi News In Kannada | News Belgaum

ಹನಿ ಟ್ರ್ಯಾಪ್ ದೂರಿಗೆ ಸಂಬಂಧಿಸಿದಂತೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿಕೆ : ನವ್ಯಾಶ್ರೀ

ಬೆಳಗಾವಿ: ನನ್ನ ವಿರುದ್ಧ ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಹನಿ ಟ್ರ್ಯಾಪ್ ದೂರಿಗೆ ಸಂಬಂಧಿಸಿದಂತೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಆರ್. ರಾವ್ ತಿಳಿಸಿದರು.

ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಖಾನಾಪುರ ತೋಟಗಾರಿಕೆಯ ಇಲಾಖೆಯ ಅಧಿಕಾರಿ ರಾಜಕುಮಾರ ಟಾಕಳೆ ಮಾಡಿದ್ದ ಹನಿ ಟ್ರ್ಯಾಪ್ ದೂರನ್ನು ಕುಲಕುಂಶವಾಗಿ ಪರಿಶೀಲನೆ ನಡೆಸಿದ ಎಪಿಎಂಸಿ ಪೊಲೀಸರು ಬೆಳಗಾವಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಸಮಗ್ರ ತನಿಖೆ ನಡೆಸಿದ ಪೊಲೀಸರು ನನ್ನ ತಪ್ಪು ಎಲ್ಲಿಯೂ ಕಂಡು ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಹಾಗೂ ಆತನ ಖಾಸಗಿ ವಿಡಿಯೋ ಲೀಕ್ ಮಾಡಿದ್ದು ಆತನೇ ನನಗೆ ಹನಿ ಟ್ರ್ಯಾಪ್ ಮಾಡಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ ಎಂದರು.

ಎಪಿಎಂಸಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿದ್ದಾರೆ. ನಾನು ಅವರ ತನಿಖೆಗೆ ಸಹಕರಿಸಿದ್ದೇನೆ. ರಾಜಕುಮಾರ ಟಾಕಳೆ ಒಬ್ಬ ಹೆಣ್ಣುಬಾಕ ನಾನು ಆತನ ವೃತ್ತಿಯ ಬಗ್ಗೆ ಮಾತನಾಡುತ್ತಿಲ್ಲ. ಆತ ಹೆಣ್ಣಿನ ವಿಚಾರದಲ್ಲಿ ಕಾಮುಕನಾಗಿದ್ದೇನೆ. ಅವನು ಸರಿಯಾಗಿ ಪೊಲೀಸರ ತನಿಖೆಗೆ ಸಹಕರಿಸಲಿಲ್ಲ. ರಾಜಕುಮಾರ ಟಾಕಳೆ ನನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾನೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ರಾಜಕುಮಾರ ಟಾಕಳೆಗೆ ಇಂಥ ಕೃತ್ಯ ನಡೆಸಲು ಸಹಾಯ ಮಾಡಿರುವ ಅವರ ಸಹೋದರರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಪೊಲೀಸರು ತನಿಖೆ ನಡೆಸುವ ವೇಳೆ ರಾಜಕುಮಾರ ಟಾಕಳೆ ಏಕೆ ಆತನ ಫೋನ್ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆತನ ಮೊಬೈಲ್ ನಲ್ಲಿ ಇನ್ನಷ್ಟು ಮಹಿಳೆಯರ ಅಶ್ಲೀಲ ಚಿತ್ರಗಳು ಇರಬಹುದು. ಆದ್ದರಿಂದ ಆತ ಪೊಲೀಸರ ತನಿಖೆಯಲ್ಲಿ ಆತನ ಮೊಬೈಲ್ ನೀಡಲಿಲ್ಲ ಎನ್ನುವ ಅನುಮಾನ ಕಾಡುತ್ತಿದೆ. ಆತನ ವಿರುದ್ಧ ನಾನು ಹೋರಾಟ ಮುಂದುವರೆಸುತ್ತೇನೆ. ನನ್ನ ಮೇಲೆ ಆರೋಪ ಮಾಡಿದ ಹನಿ ಟ್ರ್ಯಾಪ್ ಪ್ರಕರಣದಿಂದ ನನಗೆ ಎಪಿಎಂಸಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಿಂದ ಕೊಂಚ ನೆಮ್ಮದಿ ಸಿಕ್ಕಿದೆ ಎಂದರು.