ಪುಣೆಯಲ್ಲಿ 4ನೇ ಜಿ20 ಎಜುಕೇಷನ್ ವರ್ಕಿಂಗ್ ಗ್ರೂಪ್ ಸಭೆ

ಬೆಳಗಾವಿ: ಭಾರತದ ಜಿ20 ಅಧ್ಯಕ್ಷತೆಯಲ್ಲಿ ನಾಲ್ಕನೇ ಜಿ20 ಎಜುಕೇಷನ್ ವರ್ಕಿಂಗ್ ಗ್ರೂಪ್ ಸಭೆಯು ಜೂನ್ 20-21, 2023ರಂದು ಪುಣೆಯಲ್ಲಿ ನಡೆಯುತ್ತಿದೆ. ಭಾರತದ ಜಿ20 ಅಧ್ಯಕ್ಷತೆಯ ಚೀಫ್ ಕೋಆರ್ಡಿನೇಟರ್ ಹರ್ಷ ವರ್ಧನ್ ಶ್ರಿಂಗಾಲಾ ಮತ್ತು ಉನ್ನತ ಶಿಕ್ಷಣ ಕಾರ್ಯದರ್ಶಿ ಸಂಜಯ್ ಮೂರ್ತಿ ಈ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಜಿ-20 ಸದಸ್ಯ ದೇಶಗಳ 85 ಪ್ರತಿನಿಧಿಗಳು, ಆಹ್ವಾನಿತ ದೇಶಗಳು ಮತ್ತು ಒಇಸಿಡಿ, ಯುನೆಸ್ಕೊ ಮತ್ತು ಯೂನಿಸೆಫ್ ನಂತಹ ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದವು..
ಸಭೆಯ ಮೊದಲ ದಿನವು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಮೂರ್ತಿ ಅವರ ಮಾತುಗಳಿಂದ ಪ್ರಾರಂಭವಾಯಿತು, ನಂತರ ಭಾರತದ ಜಿ20 ಅಧ್ಯಕ್ಷತೆಯ ಚೀಫ್ ಕೋಆರ್ಡಿನೇಟರ್ ಹರ್ಷ ವರ್ಧನ್ ಶ್ರಿಂಗಾಲಾ ಅವರ ಭಾಷಣವಿತ್ತು. ತಮ್ಮ ಮಾತುಗಳಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಚೀಫ್ ಕೋಆರ್ಡಿನೇಟರ್ ಹರ್ಷ ವರ್ಧನ್ ಶ್ರಿಂಗಾಲಾ, “ವಿಶ್ವವು ಜಾಗತಿಕವಾಗಿ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ಭರವಸೆಯ ಪರಿಹಾರಕ್ಕೆ ಭಾರತದತ್ತ ನೋಡುತ್ತಿದೆ” ಎಂದರು. ಅವರು, “ಇಂದಿನ ಸಭೆಯು ಈ ವಿಷಯದ ಮೇಲೆ ಭವಿಷ್ಯದ ನೀತಿಯನ್ನು ನಿರ್ಧರಿಸುವಲ್ಲಿ ಬಹಳ ಉಪಯುಕ್ತವಾಗಿದೆ. “ಜಿ20 ಶಿಕ್ಷಣ ಸಚಿವರ ಪ್ರಕಟಣೆಯ ಕರಡು ಕೂಡಾ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಶಿಕ್ಷಣದ ವಿಶ್ವದಲ್ಲಿ ಸಹಕಾರ ಮತ್ತು ಆವಿಷ್ಕಾರಗಳಿಗೆ ಒತ್ತು ನೀಡಲಾಯಿತು” ಎಂದರು..
ಸಭೆಗೆ ಮುನ್ನ ವಿದೇಶಿ ಪ್ರತಿನಿಧಿಗಳು ಪುಣೆಯ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದರು. ಅತಿಥಿಗಳನ್ನು ಐತಿಹಾಸಿಕ ಶನಿವಾರ ವಾಡೆಯಲ್ಲಿ ಸ್ಥಳೀಯ ಜಾನಪದ ಕಲಾವಿದರು ಡೋಲು ಮೇಳದ ಮೂಲಕ ಸ್ವಾಗತಿಸಿದರು. ಶನಿವಾರ ವಾಡೆಯ ನಂತರ ವಿದೇಶಿ ಪ್ರತಿನಿಧಿಗಳು ಲಾಲ್ ಮಹಲ್ ಮತ್ತು ನಾನಾ ವಾಡೆಗೆ ಭೇಟಿ ನೀಡಿದರು. ಅಲ್ಲಿ ವಿದೇಶಿ ಪ್ರತಿನಿಧಿಗಳು ಛತ್ರಪತಿ ಶಿವಾಜಿಯ ಲಾಲ್ ಮಹಲ್ ಹಾಗೂ ನಾನಾ ವಾಡೆಗೆ ಸಂಬಂಧಿಸಿದೆ ಇತಿಹಾಸ ಕುರಿತು ಮಾಹಿತಿ ಪಡೆದರು. ಪುಣೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳು ಕೂಡಾ ಈ ಪಾರಂಪರಿಕ ಭೇಟಿಯ ಭಾಗವಾಗಿದ್ದರು. 50 ದೇಶಗಳ 150 ವಿದೇಶಿ ಪ್ರತಿನಿಧಿಗಳು ಈ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದರು..
ಸೋಮವಾರದಂದು ಎಲ್ಲ ವಿದೇಶಿ ಪ್ರತಿನಿಧಿಗಳನ್ನು ಸಾವಿತ್ರಿಬಾಯಿ ಫುಲೆ ಯೂನಿವರ್ಸಿಟಿಯಲ್ಲಿ ವರ್ಣರಂಜಿತ ಹಾರಗಳು ಮತ್ತು ಡೋಲು ಮೇಳದೊಂದಿಗೆ ಸ್ವಾಗತಿಸಲಾಯಿತು. ಈ ಸಭೆಯಲ್ಲಿ ಭಾಗವಾಗಿ ಯೂನಿವರ್ಸಿಟಿಯ ಸಂಯೋಜಿತ ಕಲಿಕೆಯ ಹಿನ್ನೆಲೆಯಲ್ಲಿ `ಫೌಂಡೇಷನಲ್ ಲಿಟರಿಸಿ ಅಂಡ್ ನ್ಯೂಮರಸಿ’ ಕುರಿತಾದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ 20 ದೇಶಗಳ 50 ಪ್ರತಿನಿಧಿಗಳು ಭಾಗವಹಿಸಿದ್ದರು..
ಶಿಕ್ಷಣ ಸಚಿವರ ಸಭೆಯು ಪುಣೆಯಲ್ಲಿ ಜೂನ್ 22ರಂದು ನಡೆಯಲಿದೆ. ಇದರಲ್ಲಿ ಯೂನಿಸೆಫ್, ಒಇಸಿಡಿ ಮತ್ತು ಯುನೆಸ್ಕೋ ಅಲ್ಲದೆ 15 ದೇಶಗಳ ಸಚಿವರು ಭಾಗವಹಿಸಲಿದ್ದಾರೆ.
ಮೊದಲ ಎಜುಕೇಷನ್ ವರ್ಕಿಂಗ್ ಗ್ರೂಪ್ ಸಭೆಯು ಚೆನ್ನೈನಲ್ಲಿ ನಡೆಯಿತು, ಎರಡನೆಯ ಸಭೆಯು ಅಮೃತಸರ ಮತ್ತು ಮೂರನೇ ಎಜುಕೇಷನ್ ರ್ಕಿಂಗ್ ಗ್ರೂಪ್ ಸಭೆಯು ಭುವನೇಶ್ವರದಲ್ಲಿ ನಡೆಯಿತು.