Belagavi News In Kannada | News Belgaum

ಲೈಗಿಂಕ ಕಿರುಕುಳ ನೀಡಿದ ಬಿ.ಇ.ಓ ಗೆ 5 ವರ್ಷ ಜೈಲು 25 ಸಾವಿರರೂ ತಂಡ : ಕೋರ್ಟ ಆದೇಶ

ಗದಗ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, 25 ಸಾವಿರ ರೂಪಾಯಿ ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಶಿಕ್ಷೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಮುಂಡರಗಿ ನಗರದ ಎ ಡಿ ನಗರದ ನಿವಾಸಿಯಾದ
ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಸರ್ಕಾರಿ ಸೇವೆಯಲ್ಲಿ 2020 ರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ಸಂಧರ್ಭದಲ್ಲಿ ಮನೆ ಭೇಟಿ ಕಾರ್ಯಕ್ರಮ ನೆಪದಲ್ಲಿ ಅಪ್ರಾಪ್ತ ಬಾಲಕಿ ಮನೆಗೆ ತೆರಳಿ ನಿನು ನನಗೆ ತುಂಬಾ ಇಷ್ಟಆಗಿದ್ದೀಯಾ ನಿನು ನನ್ನ ಪ್ರೀತಿಸು ಎಂದು ಅವಳನ್ನು ಎಳೆದು ಅಪ್ಪಿಕೊಂಡು ಮುತ್ತು ಕೊಟ್ಟು ಬಾಲಕಿಯ ಎದೆಯ ಎಡಗಡೆ ಮೇಲ್ಬಾಗದಲ್ಲಿ ಕೈ ಬೆರಳಿನಿಂದ ಹಾರ್ಟ ಚಿತ್ರ ಬರೆದು

 ಅವಳಿಗೆ ಲೈಂಗಿಕ ಕಿರುಕುಳ ಮಾಡಿದ್ದಾನೆ ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 29/2020 ರಂದು ಕಲಂ 354(ಎ). 8, 10, 12, ಐಪಿಸಿ ಕಲಂ ಫೋಕ್ಸೋ ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ದಿನಾಂಕ 21-03-2020 ರಂದು ಮುಂಡರಗಿ ಠಾಣೆಯ ಪಿಐ ಎಸ್ ಎಂ ಬೆಂಕಿ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ 

ಸದರಿ ಪ್ರಕರಣದ ವಿಚಾರಣೆ ನಡೆದು ಬುಧವಾರ ಆರೋಪ ಸಾಬೀತಾದ ಹಿನ್ನೆಲೆ ಇದೀಗ ಶಿಕ್ಷೆ ಪ್ರಕಟ ಆರೋಪಿಯಾದ ಸಧ್ಯ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಂಕ್ರಪ್ಪ ಹಳ್ಳಿಗುಡಿಗೆ 5 ವರ್ಷ ಜೈಲು, 25 ಸಾವಿರ ರೂಪಾಯಿ ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಶಿಕ್ಷೆ ನೀಡಿದ್ದಾರೆ.