Belagavi News In Kannada | News Belgaum

ಹೆಬ್ಬಾಳಕರ್ ಸಚಿವರಾಗಿದ್ದರಿಂದ ಗ್ರಾಮೀಣ ಕ್ಷೇತ್ರದ ಅಬಿವೃದ್ಧಿಗೆ ಹೆಚ್ಚಿನ ಬಲ – ಮೃಣಾಲ ಹೆಬ್ಬಾಳಕರ್

 
 
ಬೆಳಗಾವಿ:  ಲಕ್ಷ್ಮೀ ಹೆಬ್ಬಾಳಕರ್ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಬಲ ಬಂದಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕೆಕೆ ಕೊಪ್ಪ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮಂಜೂರಾದ 3.52 ಕೋಟಿ ರೂ,ಗಳ ವೆಚ್ಚದಲ್ಲಿ ಗ್ರಾಮದ 1541 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಹಾಗೂ ನಳಮಾಪಕ ಅಳವಡಿಕೆಯ ಕಾಮಗಾರಿಗಳಿಗೆ  ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದಾಗಿನಿಂದ ಇಡೀ ಗ್ರಾಮೀಣ ಕ್ಷೇತ್ರವನ್ನು ತಮ್ಮ ಕುಟುಂಬ ಎನ್ನುವಂತೆ ನೋಡಿಕೊಳ್ಳುತ್ತಿದ್ದಾರೆ. ಮನೆ ಮಗಳಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಸಚಿವರಾಗಿರುವುದರಿಂದ ಇನ್ನಷ್ಟು ಬಲ ಬಂದಿದ್ದು, ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದೆ. ನಾವೆಲ್ಲರೂ ಸೇರಿ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡೋಣ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಭಾರತಿ ಹಿರೇಮಠ, ಗ್ರಾಮ ಪಂಚಾಯತಿ ಸದಸ್ಯರಾದ ಶೇಖರಗೌಡ ಪಾಟೀಲ, ಸುರೇಶ ಕಂಬಿ, ಭೀಮ ಕಂಗ್ರಾಳಿ, ಬಸವರಾಜ ತೋಲಗಿ, ರಾಮನಗೌಡ ಪಾಟೀಲ, ಅಪ್ಪಣ್ಣ ನಂದಿ, ರಾಚಯ್ಯ ಹಿರೇಮಠ, ಸಂತೋಷ ಕಂಬಿ, ರುದ್ರಪ್ಪ ಚಿನ್ನಣ್ಣವರ, ಸಿದ್ರಾಯಿ ವಾಲಿ, ಈರಣ್ಣ ಚಿನ್ನಣ್ಣವರ, ಶಿವು ಕಂಬಿ, ಅನುಪ ಕಂಬಿ, ಆನಂದ ಮೊಖಾಶಿ, ಮಲ್ಲು ವಾಲಿ, ಅಕ್ಷಯ ಡೊಂಗರವಾವಿ ಮುಂತಾದವರು ಉಪಸ್ಥಿತರಿದ್ದರು.