ಪರಪುರುಷನ ಜತೆ ಸಂಬಂಧ: ಪತಿಗೆ ಖೆಡ್ಡಾ ತೋಡಿದ ಐನಾತಿ ಪತ್ನಿ ಅಂದರ್..!.
ಗಂಡನನ್ನು ಕೊಲೆಗೈದು ನಾಟಕವಾಡಿದ ಕಿಲಾಡಿ ಪತ್ನಿ ಸಂದ್ಯಾ

ಬೆಳಗಾವಿ: ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಗೆಳೆಯನೊಂದಿಗೆ ಸೇರಿ ಪತಿಯನ್ನು ಕೊಲೆಗೈದು ಕಳೆದ ಮೂರು ತಿಂಗಳ ಹಿಂದೆ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಪತ್ನಿ ಈಗ ತಾನೇ ಸಿಲುಕಿಕೊಂಡಿದ್ದಾರೆ…
ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತಿಯನ್ನೇ ಗೆಳೆಯನೊಂದಿಗೆ ಸೇರಿ ಕೊಲೆಗೈದು ಕಳೆದ ಮೂರು ತಿಂಗಳು ಹಿಂದೆ ನನ್ನ ಪತಿ ರಮೇಶ ಕಾಂಬಳೆ ಕಾಣೆಯಾಗಿದ್ದಾನೆ ಎಂದು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನಾಟಕ ಮಾಡಿದ ಪತ್ನಿಯ ಬಣ ಬಯಲಾಗಿದೆ. ..
ತಮ್ಮ ಅನೈತಿಕ ಸಂಬಂಧ ಪತಿಯ ಎದುರಿಗೆ ಬಯಲಿಗೆ ಬರುತ್ತಿದ್ದಂತೆ ಪತಿಯನ್ನು ಕೊಲೆ ಮಾಡಿ ಶವವನ್ನು ಬೇರೆ ಕಡೆ ಎಸೆದು ಎಪಿಎಂಸಿ ಪೊಲೀಸ್ ಠಾಣೆಗೆ ಕಳೆದ ಮೂರು ತಿಂಗಳ ಹಿಂದೆ ಸಂದ್ಯಾ ಕಾಂಬಳೆ ಕಾಣೆಯಾಗಿದ್ದಾರೆ ನನ್ನ ಪತಿ ಎಂದು ದೂರು ನೀಡಿದ್ದಳು. ಈಗ ಕೊಲೆಯಾಗಿದೆ ಎಂದು ತಿಳಿದ ಕೂಡಲೇ ಎಪಿಎಂಸಿ ಪೊಲೀಸರು ಕಿಲಾಡಿ ಪತ್ನಿ ಸಂದ್ಯಾ, ಆಕೆಯ ಗೆಳೆಯ ಬಾಳು ಬಿರಂಜೆ ಸೇರಿದಂತೆ ಅವರಿಗೆ ಸಹಕರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧದ ಕೊಲೆ ಎಂದು ಶಂಕಿಸಿರುವ ಪೊಲೀಸರು ರಮೇಶ ಶವ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸರು ತನಿಖೆ ನಡೆಸಿದ್ದಾರೆ../.