ಅಖಿಲ ಭಾರತ ಡೋರ್ ಕಕ್ಕಯ್ಯ ಸಮಾಜ ಮಂಡಳ ಟ್ರಸ್ಟ್ ಹೆಸರಿನಲ್ಲಿಯೇ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ

ಬೆಳಗಾವಿ : ಖಾನಾಪುರ ತಾಲೂಕು ಬೀಡಿ ಹೋಬಳಿ ಗ್ರಾಮದಲ್ಲಿರುವ ಶರಣ ಶ್ರೀ ಡೋರ್ ಕಕ್ಕಯ್ಯ ಸ್ವಾಮಿ ಮಠಕ್ಕೆ ಸರಕಾರದಿಂದ ಮಂಜೂರಾಗಿರುವ ಮೂರು ಎಕರೆ ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ತಮಗೆ ಸೂಚಿಸಿರುತ್ತದೆ. ಹೀಗಾಗಿ ಸದರಿ ಜಮೀನನ್ನು ಅಖಿಲ ಭಾರತ ಡೋರ ಕಕ್ಕಯ್ಯ ಸಮಾಜ ಮಂಡಳ ಶ್ರೀ ಕ್ಷೇತ್ರ ಕಕ್ಕೇರಿ ಈ ಟ್ರಸ್ಟ್ ಹೆಸರಿಗೆ ನೀಡಬೇಕೆಂದು ಕೋರಿ ಅಖಿಲ ಭಾರತ ಡೋರ ಕಕ್ಕಯ್ಯ ಸಮಾಜ ಮಂಡಳ ಶ್ರೀ ಕ್ಷೇತ್ರ ಕಕ್ಕೇರಿ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಸಮಕಾಲಿನವರಾದ ಜಗಜ್ಯೋತಿ ಶರಣ ಶ್ರೀ ಡೋರ ಕಕ್ಕಯ್ಯನವರ ಐಕ್ಯ ಸ್ಥಳವಾದ ಶ್ರೀ ಕ್ಷೇತ್ರ ಕಕ್ಕೇರಿ ಶ್ರೀ ಕಕ್ಕಯ್ಯ ಅಜ್ಜನವರ ಮಠದ ಸಮಗ್ರ ಅಭಿವೃದ್ಧಿಗೋಸ್ಕರ ಈ ಹಿಂದೆ ಹಲವಾರು ಬಾರಿ ತಮಗೆ ಹಾಗೂ ತಹಶೀಲ್ದಾರರಿಗೆ ಹಾಗೂ ತಮ್ಮ ಮುಖಾಂತರ ರಾಜ್ಯ ಸರ್ಕಾರಕ್ಕೆ ಎಲ್ಲ ದಾಖಲೆಗಳ ಸಮೇತ ಮನವಿಯನ್ನು ನೀಡಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷ ಶಿವರಾತ್ರಿ ದಿನದಂದು ಕಕ್ಕಯ್ಯ ಅಜ್ಜನವರ ಮಠದಲ್ಲಿ ಜಾತ್ರೆ ನಿಮಿತ್ತ ಅಸಂಖ್ಯಾತ ಭಕ್ತರು ಸುಮಾರು ಹತ್ತರಿಂದ ಹದಿನೈದು ಸಾವಿರ ಭಕ್ತರು ದರ್ಶನವನ್ನು ಪಡೆಯುತ್ತಾರೆ ಸತತ ಮೂರು ದಿವಸ ಜಾತ್ರೆ ನಡೆಯುವುದರಿಂದ ಸುಮಾರು 20 ವರ್ಷಗಳಿಂದ ಇದರ ಎಲ್ಲಾ ಉಸ್ತುವಾರಿ ಹಾಗೂ ಜಾತ್ರೆಯ ಕಾರ್ಯಭಾರವನ್ನು ಮಠದ ಟ್ರಸ್ಟ್ ಕಮಿಟಿಯವರೇ ನಿರ್ವಹಿಸಿಕೊಂಡು ಬಂದಿರುತ್ತಾರೆ.
ಅದರ ಪೂರ್ವ ಅಧ್ಯಕ್ಷರಾದ ದಿವಂಗತ ಶ್ರೀ ಲಕ್ಷ್ಮೀಕಾಂತ ಸಿದ್ದಪ್ಪ ಹುಟಗಿಕ ಇವರ ನೇತೃತ್ವದಲ್ಲಿ ಕಮಿಟಿಯವರು ನೋಡಿಕೊಂಡು ಬರುತ್ತಿದ್ದರು ತದನಂತರ ಶ್ರೀ ಅರವಿಂದ ಬಸಪ್ಪ ಘೋಡಕೆ ಇವರು ಅಧ್ಯಕ್ಷರಾಗಿ ಈ ಮಠದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮನವಿ ತಿಳಿಸಿದೆ.
ಪ್ರಸ್ತುತ ಭಕ್ತರು ನೀಡಿದ ದೇಣಿಗೆಯಿಂದಲೇ ಮಠದ ಕಾರ್ಯ ಕಲಾಪಗಳನ್ನು ನಡೆಸಿಕೊಂಡು ಬಂದಿರುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬರುವ ಭಕ್ತರಿಗೆ ತಂಗಲು ಸೂಕ್ತವಾದ ವ್ಯವಸ್ಥೆ ಸ್ಥಳದ ಕೊರತೆ ಇರುವುದರಿಂದ ಜಾತ್ರೆಯಲ್ಲಿ ತುಂಬಾ ತೊಂದರೆಯನ್ನು ಅನುಭವಿಸುವಂತಹ ಪರಿಸ್ಥಿತಿ ಎದುರಾಗುತ್ತಿದೆ, ಕಕ್ಕಯ್ಯನವರು ಐಕ್ಯವಾದ ಪುಣ್ಯಕ್ಷೇತ್ರ ಭಾರತದಾದ್ಯಂತ ಇದೊಂದೇ ಇರುವುದರಿಂದ ಇದಕ್ಕೆ ಸಂಬಂಧಪಟ್ಟ ಯಾವುದೇ ಶಾಖೆಗಳು ಇರುವುದಿಲ್ಲ.
ಆದರೆ ದುರಾದೃಷ್ಟಾವಶಾತ ಈ ಒಂದು ಇತಿಹಾಸ ಪ್ರಸಿದ್ಧವಾದ ಮಠಕ್ಕೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅದರ ನಿಮಿತ್ತ ಮಠದ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 8 ಎಕರೆ ಜಾಗವನ್ನು ಮಂಜೂರು ಮಾಡಲು ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿಯನ್ನು ನೀಡಲಾಗಿರುತ್ತದೆ.
ಈ ಮಠಕ್ಕೆ ಅಖಿಲ ಭಾರತ ಡೋರ ಕಕ್ಕಯ್ಯ ಸಮಾಜ ಮಂಡಳ ಶ್ರೀ ಕ್ಷೇತ್ರ ಕಕ್ಕೇರಿ ಅನ್ನುವಂತಹ ಸಂಬಂಧಪಟ್ಟ ಟ್ರಸ್ಟ್ ಕಮಿಟಿ ಕೂಡ ಇರುತ್ತದೆ ಹಾಗೂ ಅದಕ್ಕೆ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಇರುತ್ತಾರೆ, ಕಾರಣ ಈಗ ರಾಜ್ಯ ಸರ್ಕಾರವು ಈ ಒಂದು ಇತಿಹಾಸ ಪ್ರಸಿದ್ಧವಾದ ಮಠಕ್ಕೆ ಮೂರು ಎಕರೆ ಜಾಗವನ್ನು ಮಂಜೂರು ಮಾಡಲು ತಮಗೆ ಇದರ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುತ್ತದೆ.
ಹೀಗಾಗಿ ಸರ್ಕಾರದ ವತಿಯಿಂದ ಮಠಕ್ಕೆ ನೀಡುತ್ತಿರುವ ಜಮೀನನ್ನು ಟ್ರಸ್ಟ್ ಕಮಿಟಿ ಹೆಸರಿನಲ್ಲಿಯೇ ಮಂಜೂರು ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಸಮಾಜದಲ್ಲಿ ಹಾಗೂ ಭಕ್ತರಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದೆ, ಈ ವಿಷಯದಲ್ಲಿ ತಾವು ಮಠದ ಟ್ರಸ್ಟ ಕಮಿಟಿ ಹೆಸರಿನಲ್ಲಿ ಮಾತ್ರ ಸಂಪರ್ಕಿಸಿ ಅದರಿಂದ ದಾಖಲೆಗಳನ್ನು ಪಡೆದು ಈ ಒಂದು ಜಮೀನನ್ನು ಮಠದ ಟ್ರಸ್ಟಿಗೆ ಮಾತ್ರ ನೀಡಬೇಕೆಂದು ಸಮಾಜದ ಭಕ್ತರು ಹಾಗೂ ಟ್ರಸ್ಟ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಹಿಂದೆ ಈ ವಿಚಾರದಲ್ಲಿ ತಹಶೀಲ್ದಾರರಿಂದ ತಪ್ಪಾಗಿತ್ತು. ಆದರೆ ಈಗ ಆ ತಪ್ಪನ್ನು ಸರಿಪಡಿಸಿ ಹಾಗೂ ತಮ್ಮ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.