ಕ್ಷೇತ್ರದಲ್ಲಿ ನೀರಿನ ಅಭಾವ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಶಾಸಕ ಬಾಬಾಸಾಹೇಬ ತಾಕೀತು

ಬೈಲಹೊಂಗಲ: ಬೈಲಹೊಂಗಲ ಮತ್ತು ಕಿತ್ತೂರು ಮತಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಅಭಾವ ಆಗಬಾರದು ಅಲ್ಲದೇ ಸರ್ಕಾರದ ಯೋಜನೆಗಳು ಯಾವುದೇ ಸಂದರ್ಭದಲ್ಲೂ ಕಳಪೆಯಾಗದಂತೆ ನೋಡಿಕೊಳ್ಳಬೇಕಾದದು ಅಧಿಕಾರಿಗಳ ಹೊಣೆ ಎಂದು ಶಾಸಕರುಗಳಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಖಡಕ್ ಆಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು..
ಅವರು ಪಟ್ಟಣದ ತಾಪಂ. ಸಭಾಭವನದಲ್ಲಿ ಶುಕ್ರವಾರ ವಿಧಾನಸಭಾ ಚುನಾವಣೆ ನಂತರ ನಡೆದ ಪ್ರಥಮ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕೇವಲ ಶಾಲೆಗೆ ಬಂದು ಹಾಜರಿಗೆ ಸಹಿ ಮಾಡುವ ಶಿಕ್ಷಕರ ಮೇಲೆ ನಿಗಾ ವಹಿಸಬೇಕು. ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು. ಶಾಲಾ ಮಕ್ಕಳಿಗೆ ವಿತರಣೆ ಮಾಡುವ ಶೂ ಐಎಸ್‍ಐ ಮಾರ್ಕದೊಂದಿಗೆ ಗುಣಮಟ್ಟ ಹೊಂದಿರಬೇಕು..
ಕೇವಲ 10 ವಿದ್ಯಾರ್ಥಿಗಳಿದ್ದರೂ ಸಹಿತ ನಿರ್ಲಕ್ಷಸಿಸದೇ ಕಿತ್ತೂರು ಮತ್ತು ಬೈಲಹೊಂಗಲ ತಾಲೂಕಿನ ಶೌಚಾಲಯ ಇಲ್ಲದ ಶಾಲೆಗಳಿಗೆ ಶೌಚಾಲಯ ನಿರ್ಮಾಣವಾಗಬೇಕು. ಗಾಳಿ ಮಳೆಗೆ ಶಾಲಾ ಕಟ್ಟಡದ ಮೇಲ್ಚಾವಣಿ, ಹಂಚು ಹಾನಿಯಾಗದಂತೆ ವ್ಯವಸ್ಥೆ ಮಾಡಬೇಕು. ಶಿಥಿಲಗೊಂಡ ಶಾಲಾ ಕಟ್ಟಡಗಳಲ್ಲಿ ಪಾಠ ಮಾಡಬಾರದು. ಅಂತಲ್ಲಿ ಏನೇ ಅನಾಹುತವಾದರೂ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗುವದು. ಖಾಸಗಿ ಹಾಗೂ ಸಂಸ್ಥೆಗಳ ಹೆಸರಿನಲ್ಲಿರುವ ಶಾಲಾ ಜಾಗೆಯನ್ನು ಕಡ್ಡಾಯವಾಗಿ ಶಾಲೆ ಹೆಸರಿನಲ್ಲಿ ದಾಖಲಿಸಲು ಕ್ರಮ ಜರುಗಿಸಬೇಕು. ಸರ್ಕಾರಿ ಆಸ್ತಿ ಸರ್ಕಾರ ಪರ ಇರಲಿ ಎಂದರು..
ನಾನು ಜಲಜೀವನ ಮಿಷನ ಯೋಜನೆಯ ಕೆಲ ಪ್ರದೇಶದ ಕಾಮಗಾರಿಗಳನ್ನು ವಿಕ್ಷಿಸಿದ್ದೆನೆ ಅತಿ ಕಡಿಮೆ ಗುಂಡಿ ಅಗೆದು ಪೈಪ ಆಳವಡಿಸುತ್ತಿದ್ದಾರೆ ಹಾಗೂ ಹಲವಾರು ಕಡೆ ಕಳಪೆ ಕಾಮಗಾರಿ ಆಗಿದೆ ಅಧಿಕಾರಿಗಳು ನಿಗಾ ವಹಿಸಿ ಕ್ರಮ ಜರುಗಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಸೂಚಿಸಿದಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಎಇಇ ಪ್ರವೀಣ ಮಠಪತಿ ಪಿಡಿಓಗಳಿಗೆ ಪರಿಶೀಲಿಸಲು ತಿಳಿಸಲಾಗಿದೆ ಎಂದರು..
ಮೇಕಲಮರ್ಡಿ ಕ್ರಾಸನಿಂದ ಮೇಕಲಮರ್ಡಿ ಗ್ರಾಮದವರೆಗೂ ನಡೆಯುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಅಧಿಕಾರಿಗಳೂ ನೀಗಾವಹಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದಾಗ, ಲೋಕೋಪಯೋಗಿ ಎಇಇ ಬಸವರಾಜ ಆಳಗಿ ಈ ಕುರಿತು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ ಎಂದರು..
ಹೊಸೂರ ರಸ್ತೆ ಉದ್ದಕ್ಕೂ ಗಿಡಗಂಟಿಗಳು ಬಾಚಿದ್ದು ತೆರವುಗೊಳಿಸಬೇಕು. ಕಳಪೆಯಾದ ಮೂಗಬಸವ ರಸ್ತೆ ಕಾಮಗಾರಿ ಕುರಿತು ಕ್ರಮ ಜರುಗಿಸಬೇಕು. ಕೆಲಸ ಪ್ರಾರಂಭಿಸದ ಗುತ್ತಿಗೆದಾರರಿಗೆ ಲಿಖೀತವಾಗಿ ನೊಟೀಸ ನೀಡಬೇಕು ಎಂದು ಶಾಸಕರುಗಳು ತಾಕೀತು ಮಾಡಿದರು..
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿಯನ್ನು ಮಂಡಿಸಿದರು. ಶಾಲೆಗಳಿಗೆ ಭಾರತದ ಸಂವಿಧಾನ ಪಿಠಿಕೆ ಫಲಕಗಳ ವಿತರಣೆಗೆ ಚಾಲನೆ ನೀಡಲಾಯಿತು. ನೂತನ ಶಾಸಕರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಉಪವಿಭಾಗಾಧಿಕಾರಿ ಪ್ರಭಾವತಿ ಎಫ್. ತಾಪಂ. ಇಒ ಸುಭಾಸ ಸಂಪಗಾಂವಿ, ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು. ರಾಜು ಹಕ್ಕಿ ನಿರೂಪಿಸಿ ವಂದಿಸಿದರು…
ಮಳೆಗಾಲ ಬಂದರೂ ಮಳೆ ಅಭಾವ ಕಂಡು ಬರುತ್ತಿದೆ ಬೈಲಹೊಂಗಲ ಮತ್ತು ಕಿತ್ತೂರು ಮತಕ್ಷೇತ್ರದ ಪಟ್ಟಣ ಹಾಗೂ ಗ್ರಾಮಗಳ ಬೋರವೆಲ್, ಕುಡಿಯುವ ನೀರಿನ ಘಟಕ, ನೀರು ಸರಬರಾಜು ಟ್ಯಾಂಕರ್, ಬಾಂವಿ ಸೇರಿ ಎಲ್ಲ ನೀರಿನ ಮೂಲಗಳನ್ನು ಸಮರ್ಪಕವಾಗಿ ಇಟ್ಟುಕೊಂಡು ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಜರುಗಿಸಲಾಗುವುದು..
ಶಾಸಕ ಮಹಾಂತೇಶ ಕೌಜಲಗಿ, ಶಾಸಕ ಬಾಬಾಸಾಹೇಬ ಪಾಟೀಲ