Belagavi News In Kannada | News Belgaum

ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಅಹ್ವಾನ

 

ಬೆಳಗಾವಿ, ಜೂ.23 : ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಶಾಲೆಯ ಹೆಸರು ವಿಷಯಗಳ ವಿವರ

ಬೆಳಗಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ, ಹಿರೇಕೊಡಿ (ಚಿಕ್ಕೋಡಿ)ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಣಿತ, ಸಾಲಹಳ್ಳಿ (ರಾಮದುರ್ಗ) ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮಾಜ ವಿಜ್ಞಾನ, ಐನಾಪೂರ (ಕಾಗವಾಡ) ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿಜ್ಞಾನ, ಇಂಗ್ಲೀಷ್, ಎಕ್ಸಂಬಾ (ಚಿಕ್ಕೋಡಿ) ಮೌಲಾನಾ ಆಜಾದ ಮಾದರಿ ಶಾಲೆ ಗಣಿತ, ಇಂಗ್ಲೀಷ್, ಯಮಕನಮರಡಿ ಮೌಲಾನಾ ಆಜಾದ ಮಾದರಿ ಶಾಲೆ ಗಣಿತ, ಇಂಗ್ಲೀಷ್, ಬೆಳಗಾವಿ ರಾಮತೀರ್ಥ ನಗರ ಮೌಲಾನಾ ಆಜಾದ ಮಾದರಿ ಶಾಲೆ ವಿಜ್ಞಾನ, ಹಿಂದಿ, ಕಿತ್ತೂರ ಮೌಲಾನಾ ಆಜಾದ ಮಾದರಿ ಶಾಲೆ ವಿಜ್ಞಾನ, ಸದಲಗಾ ಮೌಲಾನಾ ಆಜಾದ ಮಾದರಿ ಶಾಲೆ ಕನ್ನಡ, ಗಣಿತ, ಇಂಗ್ಲೀಷ್, ವಿಜ್ಞಾನ, ಸಮಾಜವಿಜ್ಞಾನ, ಹಿಂದಿ, ಸವದತ್ತಿ ಮೌಲಾನಾ ಆಜಾದ ಮಾದರಿ ಶಾಲೆ ಸಮಾಜ ವಿಜ್ಞಾನ, ಬೆಳಗಾವಿ ಕಾಕತಿವೇಸ್ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ ಹಿಂದಿ ವಿಷಯವನ್ನು ಬೋಧಿಸಲು ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಹತೆ:
ಕನ್ನಡ ವಿಷಯ ಬೋಧಿಸಲು ಬಿ.ಎ, ಬಿ.ಇಡ್, ಆಗಿರಬೇಕು, ಇಂಗ್ಲೀಷ್ ಬಿ.ಎ,ಬಿ.ಇಡ್, ಗಣಿತ ಬಿ.ಎಸ್ಸಿ, ಬಿ.ಇಡ್, ವಿಜ್ಞಾನ ಬಿ.ಎಸ್ಸಿ, ಬಿ.ಇಡ್, ಸಮಾಜವಿಜ್ಞಾನ ಬಿ.ಎ ಬಿ.ಇಡ್, ಹಿಂದಿ ಬಿ.ಎ ಬಿ.ಇಡ್ ವಿದ್ಯಾರ್ಹತೆ ಹೊಂದಿರಬೇಕು.

ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ಜೂ. 27 2023 ರೊಳಗಾಗಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ ರಾಮತೀರ್ಥ ನಗರ ಕೆ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ ಸಲ್ಲಿಸಬಹುದಾಗಿದೆ.

ಸದರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಅನುಭವವುಳ್ಳ/ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ 0831-2950349 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಲ್ಲಿಸಿದ್ದಾರೆ.