ಹಾವೇರಿ ಜಿಲ್ಲೆಯ ಕುಡಿಯುವ ನೀರಿಗಾಗಿ ಜಿಂಕೆಗಳ ಅಲೆದಾಟ..

ಹಾವೇರಿ: ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ..
ಹಾವೇರಿ ಜಿಲ್ಲೆಯಲ್ಲಿ ವರುಣನ ದರ್ಶನವೇ ಆಗುತ್ತಿಲ್ಲ. ಒಂದು ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ. ಹನಿ ನೀರಿಲ್ಲದೇ ಭೂತಾಯಿ ಒಣಗಿದ್ದಾಳೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಕೆರೆ, ಬಾವಿ, ನದಿ ಯಾವುದರಲ್ಲೂ ತೊಟ್ಟು ನೀರಿಲ್ಲ..
ಒಣ ಜಮೀನಿನಲ್ಲಿ ಜಿಂಕೆಗಳ ಗುಂಪೊಂದು ಹಸಿರು ಹುಲ್ಲು ಕಾಣದೆ ಕಂಗಾಲಾಗಿವೆ. ಪ್ರತಿ ವರ್ಷ ಮುಂಗಾರು ಆರಂಭ ಆಗಿ ಇಷ್ಟೊತ್ತಿಗೆ ಒಳ್ಳೆಯ ಹುಲ್ಲು ಬೆಳೆಯುತ್ತಿತ್ತು. ಆದ್ರೆ ಈ ವರ್ಷ ಮುಂಗಾರು ವ್ಯತ್ಯಯವಾಗಿರುವುದರಿಂದ ಆಹಾರದ ನಿರೀಕ್ಷೆಯಲ್ಲಿ ಬಂದ ಜಿಂಕೆಗಳು ಕಂಗಾಲಾಗಿವೆ…