Belagavi News In Kannada | News Belgaum

485 ರೂ. ಹಣದ ಆಸೆಗಾಗಿ ವ್ಯಕ್ತಿಯೋರ್ವ ಇಬ್ಬರು ಕಾವಲುಗಾರರನ್ನು ಕೊಲೆ ಮಾಡಿದ

ಮೈಸೂರು: ಕೇವಲ 485 ರೂ. ಹಣದ ಆಸೆಗಾಗಿ ವ್ಯಕ್ತಿಯೋರ್ವ ಇಬ್ಬರು ಕಾವಲುಗಾರರನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ..

ಹುಣಸೂರಿನ ಮಿಸ್ಬಾ ಸಾಮಿಲ್‌ನಲ್ಲಿ ಕೊಲೆ ನಡೆದಿದ್ದು, ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿ ಅಭಿಷೇಕ್ (26) ಎಂಬಾತನನ್ನು ಬಂಧಿಸಿದ್ದಾರೆ. ಈತ ಕೊಲೆ ನಡೆದ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದು, ಹಣಕ್ಕಾಗಿ ವೆಂಕಟೇಶ್ (75) ಮತ್ತು ಷಣ್ಮುಖ (65) ಎಂಬ ಇಬ್ಬರು ಕಾವಲುಗಾರರಿಗೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ..

ಹತ್ಯೆಯ ಬಳಿಕ ಅವರ ಬಳಿಯಿದ್ದ 485 ರೂ.ಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕೊಲೆ ಮಾಡಿದ ಕೃತ್ಯ ಸಾಮಿಲ್ ಸಿಸಿಟಿವಿಯಲ್ಲಿ  ಸೆರೆಯಾಗಿತ್ತು. ಆರೋಪಿ ಪತ್ತೆಗೆ ಬಂದಿದ್ದ ಪೊಲೀಸ್ ಶ್ವಾನ ಸಹಾ ಸಾಮಿಲ್‌ನಲ್ಲಿ ಸುತ್ತಾಡಿ ಅಭಿಷೇಕ್ ಮನೆ ಬಳಿ ನಿಂತ ಕಾರಣ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..

ಆರೋಪಿ ಅಭಿಷೇಕ್ ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಈತ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ದಿನನಿತ್ಯ ಗಾಂಜಾ, ಸೆಲ್ಯೂಷನ್ ಸೇದಿ ಜನರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ..