Belagavi News In Kannada | News Belgaum

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲಿಸಿದ ಲೋಕೋಪಯೋಗಿ ಸಚಿವ

ಶಿರಾಡಿಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ: ಸಚಿವ ಸತೀಶ್‌ ಜಾರಕಿಹೊಳಿ

ಹಾಸನ: ಶಿರಾಡಿಘಾಟ್  ಪ್ರಯಾಣಿಕರ ಅನುಕೂಲ ಸಂಚಾರ ಸಮಸ್ಯೆ ಶಾಶ್ಚತ ಪರಿಹಾರಕ್ಕಾಗಿ   ಸುರಂಗ ಗಳನ್ನೊಳಗೊಂಡ  ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ  ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಒಟ್ಟು ಮೂವತ್ತು ಕಿಲೋಮೀಟರ್ ಉದ್ದದ  ಹೊಸ ಯೋಜನೆಗ ರೂಪುರೇಷೆ  ಸಿದ್ದಪಡಿಸಲಾಗಿದೆ. ಇದರಲ್ಲಿ 3.8 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ ಎಂದು ಮಾಹಿತಿ ನೀಡಿದರು…

ಹತ್ತು ಕಿಲೋಮೀಟರ್ ಪ್ರದೇಶ ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಪ್ತಿಯಲ್ಲಿ  ಅದಕ್ಕೆ ಬಹಳಷ್ಟು ಅರಣ್ಯ ಇಲಾಖೆಯೊಂದಿಗೆ ವ್ಯವಹರಿಸಿ ಆನೆ ಕಾರಿಡಾರ್ ಸೇರಿದಂತೆ ಪ್ರಾಣಿಗಳ ಚಲನ ವಲನಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದರು…


ಇನ್ನೂ ವಿಸ್ತೃತ ಕ್ರೀಯಾ ಯೋಜನೆ ತಯಾರಾಗಬೇಕಿದೆ.  ಹಾಲಿ  ಕೆಲವಡೆ ಪ್ರತ್ಯೇಕ ಏಕ ಮುಖ ಸಂಚಾರ ಮಾರ್ಗರೂಪಿಸುವ  ಪ್ರಸ್ತಾಪವನೆ ಕೂಡ ಇದೆ, ಆದರೆ  ಒಂದು ಕಡೆಯಿಂದ ಹೋಗಲು ಒಂದು ಕಡೆಯಿಂದ ಬರಲು ಅನುಕೂಲ ಆಗುತ್ತೆ ಎಂದರು….

ಇದು ಅತ್ಯಂತ ತಿರುವುಗಳಿರುವ  ಪ್ರದೇಶ, ಬಹಳಷ್ಟು ಅಪಘಾತಗಳಾಗುತ್ತವೆ. ಹೊಸ ಯೋಜನೆಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಲಹೆ ಯಾಗಿದೆ ಎಂದು ಸಚಿವರು ಹೇಳಿದರು…

ಕರ್ನಾಟಕಕ್ಕೆ ಇದೊಂದು ಹೆಮ್ಮೆಯ  ಯೋಜನೆ. ಇದನ್ನು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರಬೇಕಿದೆ. ಅಲ್ಲದೆ ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿ  ಗಮನಕ್ಕೆ ತರುತ್ತೇವೆ.  ಅನುಮತಿ‌ ದೊರೆತ ನಂತರ ವಿಸ್ತೃತ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು. ಲೋಕೋಪಯೋಗಿ ‌ಸಚಿವರು ಹೇಳಿದರು.

ಪ್ರಾಥಮಿಕ ಯೋಜನೆ ಪ್ರಕಾರ ಈ ಮಾರ್ಗವನ್ನು ಮಾರೇನಹಳ್ಳಿಯಿಂದ  ಅಡ್ಡಹೊಳೆಯವರೆಗೆ  ಮಾಡಲಾಗುವುದು ಮುಂದೆ  ಘಾಟ್ ಇಲ್ಲವಾದಕಾರಣ  ವಾಹನಗಳು ಸುಲಭವಾಗಿ ಹೋಗುತ್ತವೆ.  ಒಂದು ಕಡೆಯಿಂದ ಟನಲ್‌ನಲ್ಲಿ,  ಇನ್ನೊಂದು ಕಡೆ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತವೆ. ಅಪಘಾತಗಳು ಕಡಿಮೆಯಾಗುತ್ತೆ, ಸಮಯ ಉಳಿಯುತ್ತೆ ಎಂದು ಸಚಿವರು ಅಭಿಪ್ರಾಯ ಪಟ್ಟ ಅವರು, ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲಾಗುವುದು, ಪರಿಸರಕ್ಕೆ ಪ್ರಾಮುಖ್ಯತೆ ನೀಡಿ ಅದನ್ನು ಉಳಿಸಿಕೊಂಡು ಯೋಜನೆ ಮಾಡಲಾಗುವುದು ಎಂದರು…


ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಮನವರಿಕೆ ಮಾಡುತ್ತೇವೆ. ಆನಂತರ ನಮ್ಮ ರಾಜ್ಯ ಸರ್ಕಾರ ಹೆಜ್ಜೆ ಇಡುತ್ತೆ.  ನಾವು ಕೂಡ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀನಿ. ಪರಿಸರದ ಮಹತ್ವ, ಗಾಂಭೀರ್ಯತೆ ಅರಿವಿದೆ. ಅದನ್ನು ಗಮನದಲ್ಲಿಟ್ಟು  ಕೊಂಡು  ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು…

 

ಈ ವೇಳೆ ಶಾಸಕ ಸಿಮೆಂಟ್‌ ಮಂಜು, ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್, ವಿಧಾಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ,ರಾಷ್ಟ್ರೀಯ  ಹೆದ್ದಾರಿ ಪ್ರಾಧಿಕಾರ ಮುಖ್ಯ ಇಂಜಿನೀಯರ್‌ ರವೀಂದ್ರ, ಎಸ್.‌, ಎಚ್.‌ಬಿ.ಡಿ.ಪಿ ಮುಖ್ಯಯೋಜಣಾಧಿಕಾರಿ ಶಿವಯೋಗಿ ಹಿರೇಮಠ, ಉಪ ವಿಭಾಗ ಅಧಿಕಾರಿ ಅನಮೋಲ್‌ ಜೈನ್, ಕಾಂಗ್ರೆಸ್‌ ಮುಖಂಡ ರವಿ ಮುನವಳ್ಳಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು…