Belagavi News In Kannada | News Belgaum

ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಲೋಕಾಯುಕ್ತರ ಬಲೆಗೆ

ಚಾಮರಾಜನಗರ: ನಗರಸಭೆಯಲ್ಲಿ ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾ‌ನೆ.

ಕಂದಾಯ ಅಧಿಕಾರಿ ನಾರಾಯಣ್ 20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದಿದ್ದಾರೆ. ಎರಡು ಸೈಟ್​​ಗಳನ್ನು ಏಕ ನಿವೇಶನ ಮಾಡಿಕೊಡಲು ನಾರಾಯಣ್ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಲೋಕಾಯುಕ್ತ ಕಚೇರಿಗೆ ದೂರು ಬಂದಿತ್ತು.

ಈ ಹಿನ್ನೆಲೆ ನಗರಸಭೆ ಕಚೇರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ ನಾರಾಯಣ್ ಲಂಚ ಸ್ವೀಕಾರ ಮಾಡುವಾಗ ಸೆರೆ ಹಿಡಿದಿದ್ದಾರೆ. ನಗರಸಭೆ ಕಚೇರಿಯಲ್ಲಿ ಇನ್ನೂ ಪರಿಶೀಲನೆ ನಡೆಯುತ್ತಿದೆ.