Belagavi News In Kannada | News Belgaum

ಧಾರವಾಡ- ಬೆಂಗಳೂರು ವಂದೇ ಭಾರತ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಧಾರವಾಡ: ಇಂದು ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿರುವ 5 ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ ಇಂದು ಪ್ರಧಾನಿ ಮೋದಿ ಭೋಪಾಲ್ ನಿಂದ ವರ್ಚುವಲ್ ಆಗಿ ಚಾಲನೆ ನೀಡಲಾಗಿದೆ. ವಂದೇ ಭಾರತ್ ರೈಲು ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿರುವ ತಂತ್ರಜ್ಞಾನದ ದೃಷ್ಟಿಯಲ್ಲಿಯೂ ಉನ್ನತ ಗುಣಮಟ್ಟದ ವಿದ್ಯುತ್ ರೈಲು ಇದಾಗಿರಲಿದೆ.
ಪ್ರಧಾನಿ ಮೋದಿ ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಆಗಿ ಚಾಲನೆ ಮಾಡಲು ಅವಕಾಶ ಇದೆ. ಧಾರವಾಡದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಚಾಲನೆ ಸಿಕ್ಕ ನಂತರ ಬೆಂಗಳೂರಿಗೆ ತನ್ನ ಮೊದಲ ಪ್ರಯಾಣದ ಭಾಗವಾಗಿ ರೈಲು ಹೊರಟಿದೆ./////