Belagavi News In Kannada | News Belgaum

ನಾಡಪ್ರಭು ಕೆಂಪೇಗೌಡ ಜಯಂತಿ-2023

ಸುಧಾರಣೆಯ ಹರಿಕಾರ ಕೆಂಪೇಗೌಡರ ಕೊಡುಗೆ ಅಪಾರ

ಬೆಳಗಾವಿ : ಯಲಹಂಕ ನಾಡಪ್ರಭುಗಳ ವಂಶದ ಮೇಧಾವಿ ದೊರೆ ಕೆಂಪೇಗೌಡರು ಸಾಹಸ ಪರಾಕ್ರಮಕ್ಕೆ ಹೆಸರುವಾಸಿ.
ಬೆಂಗಳೂರು ಮಹಾನಗರ ಕಟ್ಟಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ, ನಾಡಿನ ಧರ್ಮ, ಸಂಸ್ಕೃತಿಗೆ ಅವರ ಕೊಡುಗೆ ಅಪಾರ ಎಂದು ಡಿಸಿಪಿ ಎಚ್ ಟಿ. ಶೇಖರ ಅವರು ತಿಳಿಸಿದರು.
ಜಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಮಂಗಳವಾರ (ಜೂ.27) ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ಕಾಲಘಟ್ಟದ ವಿಜಯನಗರ ಸಾಮ್ರಾಜ್ಯದಲ್ಲಿ ಊಳಿಗಮಾನ್ಯ ಆಡಳಿತಗಾರರಾಗಿದ್ದರು. ಈ ಸಂದರ್ಭದಲ್ಲಿ ಬೆಂದಕಾಳೂರನ್ನು ಬೆಂಗಳೂರನ್ನಾಗಿ ಮಾಡಿದರು. ನಾಡಪ್ರಭು ಕೆಂಪೇಗೌಡರು ಸದಾ ಪ್ರಜೆಗಳಿಗೆ ಸಹಾಯ ಮಾಡಲು ಹಾತೊರೆಯುತ್ತಿದ್ದರು ಎಂದು ಹೇಳಿದರು.
ಕೆಂಪೇಗೌಡರ ಆದರ್ಶ ಜೀವನ ಅವರ ವಿಚಾರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು, ಅವರ ವಿಚಾರಧಾರೆ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಡಿಸಿಪಿ ಡಾ. ಎಚ್ ಟಿ. ಶೇಖರ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೋ.ಶ್ರೀಕಾಂತ ಶಾನವಾಡ ಅವರು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ತಮ್ಮ ದೂರದೃಷ್ಠಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂದು ಹೇಳಿದರು.
ವಿಜಯನಗರ ಸಾಮ್ರಾಜ್ಯವನ್ನು ಕಾಪಾಡುವ ಉದ್ದೇಶದಿಂದ ಅನೇಕ ಸಾಹಸಗಳನ್ನು ಅವರು ಮಾಡಿದರೆ. ಇಂದಿನ ಬೆಂಗಳೂರು ಮೊದಲು ಕಾಡಿನಿಂದ ಕೂಡಿರುವ ಪ್ರದೇಶವಾಗಿತ್ತು, ಕೆಂಪೇಗೌಡರು ಅದನ್ನು ಬೆಂಗಳೂರು ನಗರವನ್ನಾಗಿ ಕಟ್ಟಲು ಕಾರಣಕರ್ತರಾದವರು ಎಂದು ಪ್ರೋ.ಶ್ರೀಕಾಂತ ಶಾನವಾಡ ಅವರು ಉಪನ್ಯಾಸ ನೀಡಿದರು.
ನಾಡಪ್ರಭು ಕೆಂಪೇಗೌಡ ಯಾವುದೇ ಜಾತಿ, ಧರ್ಮ ಜನಾಂಗದಕ್ಕೆ ಸೀಮಿತವಾಗದೆ ಎಲ್ಲ ವರ್ಗದ ಪ್ರಜೆಗಳಿಗೆ ಸಹಾಯ ಮಾಡುತ್ತಿದ್ದರು. ನಗರ ನಿರ್ಮಾಣಕ್ಕೆ ಬೇಕಾಗುವ ಅನೇಕ ಕೆರೆಗಳನ್ನು ನಿರ್ಮಿಸಿ, ಬಹಳಷ್ಟು ಸುಧಾರಣೆ ಕಾರ್ಯಗಳನ್ನು ಮಾಡಿ ನಗರ ನಿರ್ಮಿಸಿದರು.
ಅವರ ಪರಿಶ್ರಮ, ಶ್ರದ್ಧೆ, ಕಾರ್ಯ ವೈಖರಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಲಿಂಗಾಯತ ಸಮುದಾಯದ ಜಿಲ್ಲಾ ಅಧ್ಯಕ್ಷ ಬಸವರಾಜ ಹಾಗೂ ಮೋಹನ ಗುಂಡೂರ ಮತ್ತಿತರು ಉಪಸ್ಥಿತರಿದ್ದರು.//////