ಬೆಳಗಾವಿ : ವ್ಯಕ್ತಿ ನಾಪತ್ತೆ

ಬೆಳಗಾವಿ : ಬೆಳಗಾವಿಯ ಶಹಾಪೂರ, ನಾರ್ವೇಕರಗಲ್ಲಿಯಲ್ಲಿನ ತಮ್ಮ ಮಾವನ ಮನೆಯಿಂದ ಸದಾನಂದ ಕೃಷ್ಣಾ ಕೇರವಾಡಕರ(38) ಇವರು ಜೂ.26 2023 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಮನೆಯಿಂದ ಹೋದವರು ಮರಳಿ ಮನೆಗೂ ಹಾಗೂ ಸ್ವಂತ ಊರಿಗೂ ಹೋಗದೆ ಕಾಣೆಯಾಗಿದ್ದಾನೆ ಎಂದು ಆದಿನಾಥ ಶೆಟ್ಟುಪಾ ಲಾಟೂಕರ ಇವರು ಶಹಾಪೂರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ:
ಎತ್ತರ 5 ಫೂಟ್, ಕೋಲು ಮುಖ, ಸದೃಢ ಮೈಕಟ್ಟು, ದುಂಡು ಮೂಗು, ಗೋದಿಕೆಂಪು ಮೈಬಣ್ಣವಿದ್ದು, ಕಪ್ಪು ಮತ್ತು ಬಿಳಿ ಬಣ್ಣದ ಫುಲ್ ತೋಳಿನ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ್ತ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಸದರಿ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಪೋಲಿಸ್ ಆಯುಕ್ತರು ಅಥವಾ ಪೋಲಿಸ್ ಇನ್ಸಪೆಕ್ಟರ್, ಶಹಾಪೂರ ಪೋಲಿಸ್ ಠಾಣೆ ಬೆಳಗಾವಿ ಹಾಗೂ ದೂರವಾಣಿ ಸಂಖ್ಯೆ 0831-2405233, 0831-2405244, 9480804046 ಗೆ ಸಂಪರ್ಕಿಸಬಹುದು ಎಂದು ಶಹಾಪೂರ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////