ಅಂತಾರಾಜ್ಯ ಕಳ್ಳನ ಬಂಧನ : ೫೧ ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹುಕ್ಕೇರಿ : ತಾಲೂಕಿನ ಸಂಕೇಶ್ವರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಓರ್ವ ಅಂತಾರಾಜ್ಯ ಕಳ್ಳನನ್ನು ಬಂಧಿಸಿ ಅವನಿಂದ ಸುಮಾರು ೫೧ ಲಕ್ಷ ಬೆಲೆ ಬಾಳುವ ೯೨೫ ಗ್ರಾಂ ವಿವಿಧ ಪ್ರಕಾರದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಂಜೀವ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಸುದ್ಧಿಗಾರರೊಂದಿಗೆ ಈ ವಿಷಯ ತಿಳಿಸಿದ ಅವರು, ಮಧ್ಯಪ್ರದೇಶ ಧಾರ ಜಿಲ್ಲೆಯ ಮನಾವರದ ವಿನೋದ ಚವ್ಹಾಣ ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ ಎಂದರು.
೨೦೨೩ರ ಫೆ. ೪ ರಂದು ಮುಂಬಯಿAದ ಹುಬ್ಬಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಸಂಕೇಶ್ವರ ಬಳಿಯ ಹೊಟೆಲ್‌ನಲ್ಲಿ ಪ್ರಯಾಣಿಕರಿಗಾಗಿ ಉಪಹಾರಕ್ಕೆ ನಿಲ್ಲಿಸಲಾಗಿತ್ತು. ಈ ವೇಳೆ ಬಸ್‌ನಲ್ಲಿದ್ದ ಚಿನ್ನದ ವ್ಯಾಪಾರಿಯೊಬ್ಬರ ಸಿದ್ಧಪಡಿಸಿದ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಈ ಕುರಿತು ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಪ್ರಕರಣದ ಬೆನ್ನಟ್ಟಿದ ವಿಶೇಷ ತನಿಖಾ ತಂಡವು, ರಾಜ್ಯ ಮತ್ತು ಅಂತಾರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ನಗದು ಬಹುಮಾನ ನೀಡಲಾಗಿದೆ. ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಬೆಲೆ ಬಾಳುವ ವಸ್ತು ಹಾಗೂ ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ, ಡಿಎಸ್ಪಿ ಡಿ.ಎಚ್.ಮುಲ್ಲಾ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಎA.ತಹಶೀಲ್ದಾರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಆರೋಪಿಗಳ ಮೇಲೆ ಈಗಾಗಲೇ ಹೊರರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಅವರು ಹೇಳಿದರು.
ಪಿಎಸ್‌ಐಗಳಾದ ಜೆ.ಡಿ.ನರಸಿಂಹರಾಜು, ರಾಜು ಮಮದಾಪುರ, ಎಸ್.ಎಚ್.ಪವಾರ, ಎಎಸ್‌ಐ ಎ.ಎಸ್.ಸನದಿ, ಪೇದೆಗಳಾದ ಬಿ.ವಿ.ಹುಲಕುಂದ, ಎಂ.ಎA.ಕರಗುಪ್ಪಿ, ಎಂ.ಜಿ.ದೊಡಮಲೀಕ, ಬಿ.ಟಿ.ಪಾಟೀಲ, ಜಿ.ಎಸ್.ಕಾಂಬಳೆ, ಎಸ್.ಆರ್.ರಾಮದುರ್ಗ, ಯು.ವೈ.ಅರಭಾಂವಿ, ಎ.ಎಲ್.ನಾಯಕ, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ, ಸಚಿನ್ ಪಾಟೀಲ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.//////