Belagavi News In Kannada | News Belgaum

ಮುಸ್ಲಿಂ ಬಾಂಧವರಿಗೆ ಬಕ್ರೀದ್‌ ಹಬ್ಬದ ಶುಭಾಶಯ ಕೋರಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ

ಗೋಕಾಕ: ನಗರದ ಹಿಲ್‌ ಗಾರ್ಡನ್‌ ಕಚೇರಿಗೆ ಮುಸ್ಲಿಂ ಬಾಂಧವರೂ  ಭೇಟಿ ನೀಡಿ,  ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ  ಅವರಿಗೆ  ಬಕ್ರೀದ್‌ ಹಬ್ಬದ ಶುಭಾಶಯಗಳು ಕೋರಿದರು.

ಬಳಿಕ, ಸಚಿವರಾದ ಸತೀಶ ಜಾರಕಿಹೊಳಿ  ಅವರು, ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್‌ ಹಬ್ಬದ   ಹಬ್ಬದ ಶುಭಾಶಯಗಳು. ಬಕ್ರೀದ್ ತ್ಯಾಗದ ಹಬ್ಬ. ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಸಮಾಜದಲ್ಲಿ ಸೋದರತ್ವ, ಸೌಹಾರ್ದತೆಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಈ  ಸಂದರ್ಭದಲ್ಲಿ ಯರಗಟ್ಟಿ ಮುಸ್ಲಿಂ ಸಮಾಜದವರಾದ ಮಲಿಕಸಾಬ ಅಮಿನಸಾಬ ಬಾಗವಾನ, ಕಾಶೀಂಸಾಬ ಹೊರಟ್ಟಿ, ಮದಾರಸಾಬ ಚೌಂದಬಾನ್ನವರ, ಸಲೀಂ ಜಮಾದಾರ,  ಹುಸೇನ್‌ ದಿಲಾವರನಾಯ್ಕ, ಮೌಲಾಸಾಬ ಮುಲ್ಲಾ, ಅಲ್ತಾಪ ಮುಲ್ಲಾ, ರಿಯಾಜ ದಿಲಾವರನಾಯ್ಕ ಹಾಗೂ ಇತರರು ಇದ್ದರು.//////