ಟ್ವಿಟರ್‌ಗೆ 50 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್

ನವದೆಹಲಿ: ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ 50 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಏನಿದು ಪ್ರಕರಣ?ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೈತರ ಪ್ರತಿಭಟನೆಗಳು ಮತ್ತು ಕರೋನ ವೈರಸ್‌ಗೆ ಸಂಬಂಧಿಸಿದ ಟ್ವೀಟ್ ಮಾಡಿದ್ದ ಕೆಲವು ಖಾತೆಗಳನ್ನು ತೆಗೆದುಹಾಕಲು ಟ್ವಿಟರ್‌ಗೆ ಕೇಳಿದೆ. ಟ್ವಿಟರ್ ಆದೇಶಗಳನ್ನು ಪಾಲಿಸದೇ, “ಈ ಆದೇಶ, ಅಧಿಕಾರದ ಅತಿಯಾದ ಬಳಕೆಯನ್ನು ಪ್ರದರ್ಶಿಸುತ್ತವೆ” ಎಂದು ಹೇಳಿತ್ತು.
ಇದಕ್ಕಾಗಿ ಟ್ವಿಟರ್‌ಗೆ ನೋಟಿಸ್ ಕಳುಹಿಸಲಾಗಿದ್ದರೂ ಅದು ಆದೇಶವನ್ನು ಪಾಲಿಸಲಿಲ್ಲ ಎಂದು ವರದಿಯಾಗಿದೆ. ಆದೇಶ ಉಲ್ಲಂಘಿಸಿದಲ್ಲಿ 7 ವರ್ಷಗಳ ಜೈಲು ಶಿಕ್ಷೆ ಮತ್ತು ಅನಿಯಮಿತ ದಂಡ ಕಟ್ಟಬೇಕಾಗುತ್ತದೆ” ಎಂದು ಟ್ವಿಟರ್‌ಗೆ ತಿಳಿಸಲಾಗಿದೆ. ಆದರೆ ಅದು ಕೂಡ ಟ್ವಿಟ್ಟರ್ಗೆ ಆದೇಶ ಪಾಲಿಸುವಂತೆ ಮಾಡುವಲ್ಲಿ ವಿಫಲವಾಗಿದೆ.
ಐಟಿ ಕಾಯಿದೆ 2000ರ @Gol_MeitY u/s.69(A) ನೀಡಿದ ತಡೆ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ,” ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಎಂದು ಟ್ವಿಟ್ನಲ್ಲಿ ತಿಳಿಸಿದ್ದಾರೆ.
2021 ರಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಟ್ವಿಟರ್, ಭಾರತ ಸರ್ಕಾರದಿಂದ ಒತ್ತಡಕ್ಕೆ ಒಳಗಾಗಿತ್ತು ಎಂಬ ಮಾಜಿ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಅವರ ಹೇಳಿಕೆಯನ್ನು ರಾಜೀವ್ ಚಂದ್ರಶೇಖರ್ ಅವರು ಈಗಾಗಲೇ ಪ್ರಶ್ನಿಸಿದ್ದಾರೆ. ಅವರು ಡಾರ್ನೆ ಅವರ ಹೇಳಿಕೆಗಳನ್ನು “ಸಂಪೂರ್ಣ ಸುಳ್ಳು” ಮತ್ತು “ಇದು ಟ್ವಿಟರ್‌ನ ವಿವಾದಾತ್ಮಕ ಭೂತಕಾಲವನ್ನು ಶುದ್ಧಗೊಳಿಸುವ ಪ್ರಯತ್ನ” ಎಂದು ಕರೆದಿದ್ದಾರೆ.
“ನೀವು ಆದೇಶ ಪಾಲಿಸುವುದನ್ನು ಯಾಕೆ ವಿಳಂಬಗೊಳಿಸಿದ್ದೀರಿ? ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾಗಲು ನೀವು ಯಾವುದೇ ಕಾರಣವನ್ನು ನೀಡಿಲ್ಲ.. ನಂತರ ನೀವು ಇದ್ದಕ್ಕಿದ್ದಂತೆ ಆದೇಶ ಪಾಲಿಸುತ್ತೀರಿ ಮತ್ತು ನ್ಯಾಯಾಲಯವನ್ನು ಸಂಪರ್ಕಿಸುತ್ತೀರಿ. ನೀವು ರೈತರಲ್ಲ, ಬಿಲಿಯನ್ ಡಾಲರ್ ಕಂಪನಿ” ಎಂದಿರುವ ನ್ಯಾಯಾಲಯದ ಪೀಠ ತೀರ್ಪು 50 ಲಕ್ಷ ರೂ. ದಂಡ ಪಾವತಿಸುವಂತೆ ತೀರ್ಪು ಪ್ರಕಟಿಸಿತು./////