Belagavi News In Kannada | News Belgaum

ಐಡಿಎಸ್‌ಎಸ್‌ಸಿ-ರಾಷ್ಟ್ರಿಯ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಲಿಂಗರಾಜ ಕಾಲೇಜಿನ ಇಬ್ಬರು ಎನ್‌ಸಿಸಿ ಕೆಡೆಟ್‌ಗಳ ಆಯ್ಕೆ

ಬೆಳಗಾವಿ ೧ ಜುಲೈ : ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಪ್ರೀತಿ ಚಂದ್ರಶೇಖರಯ್ಯ ಸವದಿ ಹಾಗೂ ಜ್ಯೂನಿಯರ್ ಅಂಡರ್ ಆಫೀಸರ್ ಗುರುನಾಥ ಲಕ್ಷö್ಮಣ ರಾಜೋಳಿ ಕೇರಳದ ತಿರುವನಂತಪುರದಲ್ಲಿ ಜುಲೈ ೩ ರಿಂದ ೧೬ ವರೆಗೆ ನಡೆಯಲಿರುವ ರಾಷ್ಟçಮಟ್ಟದ ಎನ್‌ಸಿಸಿ ಅಂತರ ನಿರ್ದೇಶನಾಲಯ(ಡಿಜಿ ಎನ್‌ಸಿಸಿ, ನವದೆಹಲಿ) ಶೂಟಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದ ೯೦ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳಲ್ಲಿ ಈ ಇಬ್ಬರು ಕೆಡೆಟ್‌ಗಳು ಅಂತಿಮ ಘಟ್ಟದ ಅಗ್ರ ಶ್ರೇಯಾಂಕದ ೧೬ರಲ್ಲಿ ಆಯ್ಕೆಯಾಗಿದ್ದಾರೆ.

ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಕೆ. ಶ್ರೀನಿವಾಸ್, ೨೬ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಎಡಮ್ ಆಫೀಸರ್ ಶಂಕರ ಯಾದವ್, ಸುಬೇದಾರ್ ಮೇಜರ್ ನಿಲೇಶ್ ದೇಸಾಯಿ, ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ್ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.