Belagavi News In Kannada | News Belgaum

ವಂದೇ ಭಾರತ್ ರೈಲಿಗೆ ಕಲ್ಲು ಎಸೆತ: ಪ್ರಕರಣ ದಾಖಲು

ದಾವಣಗೆರೆ: ನಗರದ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿ ಬಳಿಯ ಜಿಎಂಐಟಿ ಹಿಂಭಾಗದಲ್ಲಿ ಕಿಡಿಗೇಡಿಯೊಬ್ಬ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದಿರುವ ಪ್ರಕರಣ ಶನಿವಾರ ಮಧ್ಯಾಹ್ನ ವರದಿಯಾಗಿದೆ.

ಧಾರವಾಡದಿಂದ ರೈಲು ವಾಪಸ್ ಬೆಂಗಳೂರಿಗೆ ತೆರಳುವಾಗ ದಾವಣಗೆರೆ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಿಡಿಗೇಡಿ ಕಲ್ಲು ಹೊಡೆದು ಪರಾರಿಯಾಗಿದ್ದಾನೆ. ಕಲ್ಲಿನ ರಭಸಕ್ಕೆ ರೈಲಿನ ಗಾಜಿನ ಕಿಟಕಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ರೈಲ್ವೆ ಆ‌ ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////