ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಬಿಜೆಪಿ ಮುಖಂಡ

ಬೆಂಗಳೂರು: ಬಿಜೆಪಿ ಮುಖಂಡರೊಬ್ಬರು ಪಕ್ಷದ ಕಚೇರಿಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿ ಘಟನೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದಿದೆ.
ಚಿತ್ರದುರ್ಗದ ಹಿರಿಯೂರು ತಾಲೂಕಿನ ಸಿದ್ದೇಶ್ ಯಾದವ್ (49) ಹೃದಯಾಘಾತದಿಂದಾಗಿ ಸಾವಿಗೀಡಾದ ಬಿಜೆಪಿ ಮುಖಂಡ. ಇವರು ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಬಳ್ಳಾರಿ ವಿಭಾಗದ ಪ್ರಭಾರಿ, ಹಿಂದುಳಿದ ವರ್ಗಗಳ ಮುಖಂಡರೂ ಆಗಿದ್ದರು. ಜಿಲ್ಲಾ ಪ್ರಭಾರಿಗಳ ಸಭೆಗಾಗಿ ಇವರು ಆಗಮಿಸಿದ್ದರು. ಪಕ್ಷದ ಸಭೆ ಮುಗಿಸಿ ಹೊರ ಬರುವಾಗ ಇವರು ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ಕೂಡಲೇ ಇವರನ್ನು ಹತ್ತಿರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಾರ್ಗಮಧ್ಯೆ ಕೊನೆಯುಸಿರೆಳೆದರು./////