Belagavi News In Kannada | News Belgaum

ಮುರಿದ ರೈಲ್‌ ಚಕ್ರ: ಪ್ರಯಾಣಿಕರ ಸಮಯಪ್ರಜ್ಞೆಯಿಂದ ತಪ್ಪಿನ ಅನಾಹುತ

ಬಿಹಾರ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲೊಂದು ಮುರಿದ ಚಕ್ರದಲ್ಲೇ ಸುಮಾರು ಹತ್ತು ಕಿಲೋ ಮೀಟರ್ ಚಲಿಸಿದ ಆಘಾತಕಾರಿ ಘಟನೆ ಬಿಹಾರದ ವೈಶಾಲಿಯಲ್ಲಿ ಬೆಳಕಿಗೆ ಬಂದಿದೆ.

ಭಾನುವಾರ ತಡರಾತ್ರಿ ಪವನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಪ್ರಯಾಣ ಬೆಳೆಸಿತ್ತು ಈ ವೇಳೆ ಮುಜಾಫರ್‌ಪುರ ತಲುಪುತ್ತಿದ್ದಂತೆ ರೈಲಿನ ಒಂದು ಚಕ್ರ ತುಂಡಾಗಿದೆ. ವರದಿಗಳ ಪ್ರಕಾರ, ಬೋಗಿ ಸಂಖ್ಯೆ ಎಸ್ -11 ಬೋಗಿಯ ಚಕ್ರ ಮುರಿದುಹೋಗಿತ್ತು, ಇದನ್ನು ರೈಲಿನ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ ಕೂಡಲೇ ರೈಲು ಅಧಿಕಾರಿಗೆ ಮಾಹಿತಿಯನ್ನು ನೀಡಿದ್ದಾರೆ.

ಒಂದು ವೇಳೆ ಚಕ್ರ ಮುರಿದಿರುವುದನ್ನು ಗಮನಿಸದೇ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಂಭವವಿತ್ತು ಎನ್ನಲಾಗಿದೆ.  ಪ್ರಯಾಣಿಕರ ಪ್ರಕಾರ, ಭಗವಾನ್‌ಪುರ ನಿಲ್ದಾಣದಲ್ಲಿ ರೈಲು ನಿಂತಾಗಲೂ ಚಕ್ರ ಮುರಿದಿರುವುದು ಚಾಲಕನ ಗಮನಕ್ಕೆ ಬಂದಿಲ್ಲ. ರೈಲು ಮತ್ತೆ ಮುರಿದ ಚಕ್ರದೊಂದಿಗೆ ಮುಂದಕ್ಕೆ ಚಲಿಸಲಾರಂಭಿಸಿತು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಚಕ್ರ ಮುರಿದಿರುವುದು ಗಮನಕ್ಕೆ ಬಂದಿದೆ ಕೂಡಲೇ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ.

ಈ ಬಗ್ಗೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿ ಬಳಿಕ ಮುಂದಿನ ನಿಲ್ದಾಣದ ವರೆಗೆ ನಿಧಾನವಾಗಿ ಚಲಾಯಿಸಿ ಮುರಿದ ಚಕ್ರವನ್ನು ಸರಿಪಡಿಸಲಾಯಿತು ಎಂದು ಹೇಳಿದ್ದಾರೆ.////