Belagavi News In Kannada | News Belgaum

ಪತ್ನಿ ಶೀಲ ಶಂಕಿಸಿ ಇಬ್ಬರ ಬರ್ಬರ ಹತ್ಯೆಗೈದ ಪತಿ: ಆರೋಪಿ ಅಂದರ್

ಗೋಕಾಕ: ಪತ್ನಿ ಶೀಲ ಶಂಕಿಸಿದ ಪತಿಯೊಬ್ಬ ಇಬ್ಬರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅಕ್ಕತಂಗೇರಾಳ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಮಲ್ಲಿಕಾರ್ಜುನ ಜಗದಾರ್ (40) , ರೇಣುಕಾ ಮಾಳಗಿ ( 42) ಕೊಲೆಯಾದರವರು. ರೇಣುಕಾಳ ಪತಿ ಯಲ್ಲಪ್ಪ ಯಾಳಗಿ (45) ಬಂಧಿತ ಆರೋಪಿ.

ಪತ್ನಿಯ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////