ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ

ಬೆಂಗಳೂರು: ಡ್ರಗ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಮಹಾರಾಷ್ಟ್ರ ಮೂಲದ ಒಂದೇ ಕುಟುಂಬದ 3 ಮಂದಿ ಸೇರಿ ನಾಲ್ವರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 50 ಲಕ್ಷ ರೂಪಾಯಿ ಮೌಲ್ಯದ 96 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕಾಶ್, ಅಮುಲ್, ರಾಹುಲ್, ಸಯೀದ್ ಸಾದಿಕ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಸಾದಿಕ್ ನ್ನು ಹೊರತುಪಡಿಸಿ ಉಳಿದವರೆಲ್ಲರೂ ಒಂದೇ ಕುಟುಂಬದ ಸದಸ್ಯರಾಗಿದ್ದು ಸಾದಿಕ್ ಜೊತೆ ಸೇರಿದ ನಂತರ ಈ ಧಂಧೆಗೆ ಇಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಗಿರಿನಗರ ಪೊಲೀಸರು ಬಂಧನಕ್ಕೆ ತೆರಳಿದಾಗ ಪ್ರತಿರೋಧ ಎದುರಿಸಿದ್ದರು. ಬಂಧಿತರ ಕುಟುಂಬ ಸದಸ್ಯರು ತಮ್ಮನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡಲು ಯತ್ನಿಸುತ್ತಿದ್ದಾರೆ ಎಂದೂ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಮಹಾರಾಷ್ಟ್ರ ಪೊಲೀಸರು ಗಿರಿನಗರ ಪೊಲೀಸರನ್ನು ಹಿಂಬಾಲಿಸಿ ತಡೆಯಲು ಯತ್ನಿಸಿದರು. ಕೊನೆಗೆ ವಾಸ್ತವಾಂಶ ತಿಳಿದು ಬಂಧನಕ್ಕೆ ಅನುವು ಮಾಡಿಕೊಟ್ಟರು. ತನಿಖೆ ಮುಂದುವರೆದಿದೆ./////