Belagavi News In Kannada | News Belgaum

ಹೆಚ್‍ಡಿಕೆ ಬೇಸರದಲ್ಲಿ ಇದ್ದಾರೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್‌

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳ ವಿಚಾರಕ್ಕೆ ಬಿಜೆಪಿ ಪ್ರತಿಭಟನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಒಳ್ಳೆಯದು ಆಗಲಿ ನಮ್ಮ ಗ್ಯಾರಂಟಿಯನ್ನು ಒಳ್ಳೆಯ ಪ್ರಚಾರ ಮಾಡ್ತಾ ಇದ್ದಾರೆ. ನಮ್ಮಿಂದ ತಪ್ಪಾಗಿದ್ರೆ ಸಲಹೆ ಕೊಡಲಿ ಸರಿ ಮಾಡಿಕೊಳ್ತೀವಿ ಯಡಿಯೂರಪ್ಪ ಅವರಿಗೆ ಜನ ರೆಸ್ಟ್ ಕೊಟ್ಟಿದ್ದಾರೆ. ಹೀಗಾಗಿ ಅವರು ರೆಸ್ಟ್ ತೆಗೆದುಕೊಳ್ಳಲಿ. ಸುಮ್ಮನೆ ಆರೋಪ ಮಾಡೋದು ಸರಿ ಇಲ್ಲ ಎಂದು ಗೇಲಿ ಮಾಡಿದರು.

 

ವರ್ಗಾವಣೆ ದಂಧೆ ವಿಚಾರಕ್ಕೆ ಪ್ರಥಮ ಬಾರಿಗೆ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆಶಿ, ಸಿಎಂ ಕಚೇರಿಯಲ್ಲಿ 30 ಲಕ್ಷ ಹಣ ಪಡೆಯುತ್ತಾರೆ ಅನ್ನೋ ನಿರಾಧಾರ. ಯಾವುದೇ ಆಧಾರ ಇಲ್ಲದೇ ಆರೋಪ ಮಾಡ್ತಾರೆ ಪಾಪ. ಕುಮಾರಸ್ವಾಮಿ ಅವರಿಗೆ ಸೀಟು ಕಡಿಮೆ ಬಂದಿದೆ. ಇದರಿಂದ ತುಂಬಾ ಬೇಜಾರಾಗಿದೆ ಅದಕ್ಕೆ ಈ ರೀತಿಯಲ್ಲಿ ಮಾತಾಡ್ತಾ ಇದ್ದಾರೆ. ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಬೇಡ. ಬೇಜಾರಲ್ಲಿ ಮಾತಾಡ್ತಾ ಇದ್ದಾರೆ ಮಾತಾಡ್ಲಿ ಪಾಪ ಎಂದು ಕುಮಾರಸ್ವಾಮಿಗೆ ಡಿಕೆಶಿ ಟಾಂಗ್ ಕೊಟ್ಟರು./////