Belagavi News In Kannada | News Belgaum

ಬರಹಗಾರ್ತಿ ಕಾಜಲ ಆನಂದ ಹೆಗಡೆ ಅವರಿಗೆ ರಾಷ್ಟ್ರ ಪ್ರಶಸ್ತಿ

ಬೆಳಗಾವಿ : ಬರಹಗಾರ್ತಿ ಕಾಜಲ ಆನಂದ ಹೆಗಡೆ ಅವರಿಗೆ ರಾಷ್ಟ್ರ ಪ್ರಶಸ್ತಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಕಾಜಲ ಆನಂದ ಹೆಗಡೆ ಅವರನ್ನು ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ರಾಷ್ಟೀಯ ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.


ಜುಲೈ ಒಂದರಂದು ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಸುಜ್ಞಾನ ವಿದ್ಯಾಪೀಠ ಮತ್ತು ಸಂಸ್ಕೃತಿಕ ರಂಗ ಕಲಾವಿದರ ಶ್ರೀ ಮಾತಾ ಪ್ರಕಾಶನ (ರಿ) ಕರ್ನಾಟಕ ಹಾಗೂ ದಿ ಜರ್ನಿ ಆಫ್ ಸೊಸೈಟಿ (ರಿ) ದೆಹಲಿ ಇವರು ನಡೆಸಿದ ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇವರನ್ನು ಗೌರವಿಸಲಾಗಿದೆ.
ಇವರ ಅನೇಕ ಕವನಗಳು, ನೀತಿ ಕಥೆಗಳು ಮತ್ತು ಇನ್ನಿತರ ಬರಹಗಳನ್ನು ಗುರುತಿಸಿ ರಾಷ್ಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.