ಅರ್ಜಿ ಆಹ್ವಾನ ; ಪ್ರಕಟಣೆ

ಕಿತ್ತೂರ ಪಟ್ಟಣ ಪಂಚಾಯತ್: ಪ್ಲಾಸ್ಟಿಕ ಮುಕ್ತ ಅಭಿಯಾನ
ಬೆಳಗಾವಿ, ಜು.06 : ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ ಬಳಕೆ, ಮಾರಟ, ಸಂಗ್ರಹಣೆ, ವಿತರಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲು ಜುಲೈ. 01 2023 ರಿಂದ ಜು.28 2023 ರವರೆಗೆ ಪ್ಲಾಸ್ಟಿಕ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪ್ಲಾಸ್ಟಿಕ ಬಳಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಅಭಿಯಾನದ ಯಶಸ್ವಿಗೆ ಸಹಕರಿಸುವ ಅಂಗಡಿಕಾರರಿಗೆ “ಹಸಿರು ಸಂಸ್ಥೆ” ಎಂದು ಘೋಷಿಸಿ ಪಟ್ಟಣ ಪಂಚಾಯತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಸದರಿ ಸಾರ್ವಜನಿಕರು ಹಾಗೂ ಎಲ್ಲಾ ಅಂಗಡಿ ಮಾಲಕರು ಪ್ಲಾಸ್ಟಿಕ ಮುಕ್ತ ಅಭಿಯಾನದಲ್ಲಿ ಸಹಕರಿಸಬೇಕು ಎಂದು ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಪೆÇಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ
ಬೆಳಗಾವಿ, ಜು.06:. ಪೆÇಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ಅನ್ನು ರಿಯಾಯಿತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಘನ ಕರ್ನಾಟಕ ಸರ್ಕಾರವು ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡುವಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ರಾಜ್ಯ ಮಟ್ಟದ ಸಮಿತಿಗೆ ಪುಸ್ತಕಗಳ ಆಯ್ಕೆ: ಅರ್ಜಿ ಆಹ್ವಾನ
ಬೆಳಗಾವಿ, ಜು.06: ಜನವರಿ.01 2023 ರಿಂದ ಜೂನ್.30 2023 ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಣೆಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಫರ್ಧಾತ್ಮಕ, ಪಠ್ಯ ಪುಸ್ತಕ, ಸಾಂದಭಿರ್ಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ/ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರೆ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಸ್ವೀಕರಿಸಲು ಅರ್ಜಿಗಳನ್ನು ಆಹ್ವಾನಿಸಿದೆ.
2023 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜುಲೈ.31 2023 ರ ಸಂಜೆ 5 ಗಂಟೆ ಒಳಗಾಗಿ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು(ನೋಂದಣಿ ಪತ್ರದ ಪ್ರತಿಯೊಂದಿಗೆ) ನಿಬಂಧನೆಗಳಿಗೆ ಒಳಪಟ್ಟು ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿ ಸಲ್ಲಿಸಬಹುದು.
ಅರ್ಜಿ ನಮೂನೆಯು ಇಲಾಖೆಯ ಅಂತರ್ಜಾಲದಲ್ಲಿ (ತಿತಿತಿ.ಜಠಿಟ.ಞಚಿಡಿಟಿಚಿಣಚಿಞಚಿ.gov.iಟಿ) ಹಾಗೂ ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳಲ್ಲಿ ದೊರೆಯುತ್ತೆವೆ.
ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
ಪುಸ್ತಕದ ಒಂದು ಪ್ರತಿ, ಕಾಪಿರೈಟ್‍ನ ನೋಂದಣಿಯ ದೃಢೀಕರಿಸಿದ ನಕಲು ಪ್ರತಿ, ವಿತರಕರು ಸರಬರಾಜು ಹಕ್ಕನ್ನು ಪಡೆದಿದ್ದಲ್ಲಿ ಅದರ ನಕಲು ಪ್ರತಿಯನ್ನು ಅರ್ಜಿಯ ಜೊತೆ ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಸದರಿ ದಾಖಲಾತಿಗಳು ಇಲ್ಲದಿದ್ದಲ್ಲಿ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22864990, 22867358 ಸಂಪರ್ಕಿಸಬಹುದು ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಗ್ರಾಮ ಪಂಚಾಯತಿ ಉಪ ಚುನಾವಣೆ: ಅಧಿಸೂಚನೆ ಪ್ರಕಟ
ಬೆಳಗಾವಿ, ಜು.06 :. ಬೆಳಗಾವಿ ಜಿಲ್ಲೆಗೆ ಸಂಭಂದಿಸಿದಂತೆ ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆ -2023 ರ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ.
ನಾಮ ಪತ್ರ ಸಲ್ಲಿಸಲು ದಿನಾಂಕ ಜುಲೈ. 12, 2023 ಬುಧವಾರ ಕೊನೆಯ ದಿನವಾಗಿರುತ್ತದೆ. ಗುರುವಾರ (ಜು.13) ನಾಮ ಪತ್ರ ಪರಿಶೀಲಿಸುವ ಕೊನೆಯ ದಿನಾಂಕವಾಗಿರುತ್ತದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಜು.15 ಕೊನೆಯ ದಿನಾಂಕವಾಗಿರುತ್ತದೆ ಮತದಾನ ಅವಶ್ಯವಿದ್ದರೆ, ಜುಲೈ.23 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು.
ಅದೇ ರೀತಿಯಲ್ಲಿ ಮರು ಮತದಾನ ಅವಶ್ಯವಿದ್ದಲ್ಲಿ, ಜುಲೈ.25 ರಂದು ಬೆಳಿಗ್ಗೆ 7 ಗಂಟೆಯಿಂದ 5 ಸಂಜೆ ಗಂಟೆಯವರೆಗೆ ಮರು ಮತದಾನ ನಡೆಯಲಿವೆ. ಜು.26 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಬಂಧಿತ ತಾಲೂಕಾ ಕೇಂದ್ರಗಳಲ್ಲಿ ಮತಗಳ ಎಣಿಕೆ ಪ್ರಕ್ರಿಯೆ ನಡೆಸಲಾಗುವುದು.
ಸಾರ್ವತ್ರಿಕ ಚುನಾವಣೆ:
ರಾಯಬಾಗ ತಾಲೂಕಿನ ಮಂಟೂರು ಗ್ರಾಮ ಪಂಚಾಯತಿಯ ವಾರ್ಡ್ ನಂ 1 ರಲ್ಲಿ 4 ಸದಸ್ಯ ಸ್ಥಾನಗಳು, ಮಂಟೂರು ವಾರ್ಡ್ ನಂ 2 ರಲ್ಲಿ 3 ಸದಸ್ಯರ ಸ್ಥಾನ ಹಾಗೂ ಮಂಟೂರು ವಾರ್ಡ್ 3 ರಲ್ಲಿ 3 ಸೇರಿದಂತೆ ಒಟ್ಟು 10 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಉಪ ಚುನಾವಣೆ:
ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮ ಪಂಚಾಯತಿಯ ವಾರ್ಡ್ 5 ರಲ್ಲಿ 1 ಸದಸ್ಯ ಸ್ಥಾನ, ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮ ಪಂಚಾಯತಿಯ ವಾರ್ಡ್ ನಂ 6 ರಲ್ಲಿ 1 ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮ ಪಂಚಾಯತಿಯ ವಾರ್ಡ್ ನಂ 2 ರಲ್ಲಿ 1 ಸದಸ್ಯರ ಸ್ಥಾನ, ಮೂಡಲಗಿ ತಾಲೂಕಿನ ಯಾದವಾಡ ಗ್ರಾಮ ಪಂಚಾಯತಿಯ ವಾರ್ಡ್ ನಂ 3 ರಲ್ಲಿ 1 ಸದಸ್ಯರ ಸ್ಥಾನ, ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮ ಪಂಚಾಯತಿಯ ವಾರ್ಡ್ 3 ರಲ್ಲಿ 1, ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮ ಪಂಚಾಯತಿಯ ವಾರ್ಡ್ 4 ರಲ್ಲಿ 1 ಹಾಗೂ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮ ಪಂಚಾಯತಿಯ ವಾರ್ಡ್ ನಂ 5 ರಲ್ಲಿ 1 ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ರಾಯಬಾಗ ತಾಲೂಕಿನ ರಾಯಬಾಗ ಗ್ರಾಮಿಣ ಗ್ರಾಮ ಪಂಚಾಯತಿಯ ವಾರ್ಡ್ 6 ರಲ್ಲಿ 1 ಸದಸ್ಯರ ಸ್ಥಾನ, ಗೋಕಾಕ್ ತಾಲೂಕಿನ ನಂದಗಾಂವ ಗ್ರಾಮ ಪಂಚಾಯತಿಯ ವಾರ್ಡ್ ನಂ 3 ರಲ್ಲಿ 1, ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮ ಪಂಚಾಯತಿಯ ವಾರ್ಡ್ ನಂ 5 ರಲ್ಲಿ 1, ಬೈಲಹೊಂಗಲ ತಾಲೂಕಿನ ಕಡೋಲಿ ಗ್ರಾಮ ಪಂಚಾಯತಿಯ ವಾರ್ಡ್ ನಂ 1 ರಲ್ಲಿ 1, ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯತಿಯ ವಾರ್ಡ್ ನಂ 8 ರಲ್ಲಿ 1, ಬೆಳಗಾವಿ ತಾಲೂಕಿನ ಧಾಮಣಿ ಎಸ್ ಗ್ರಾಮ ಪಂಚಾಯತಿಯ ವಾರ್ಡ್ ನಂ 5 ರಲ್ಲಿ 1 ಹಾಗೂ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮ ಪಂಚಾಯತಿಯ ವಾರ್ಡ್ ನಂ 2 ರಲ್ಲಿ 1 ಸದಸ್ಯರ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///