ಹುಕ್ಕೇರಿಯಲ್ಲಿ ಶನಿವಾರ ಯಕ್ಷಗಾನ ಪ್ರದರ್ಶನ. ಮಹಿಷಿ ಮರ್ದಿನಿ ಪೌರಾಣಿಕ

ಹುಕ್ಕೇರಿ: ಉಡುಪಿ ಜಿಲ್ಲೆಯ ನಡೂರ್ ಮಂದಾರ್ತಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ
ಜುಲೈ ಶನಿವಾರ 8 ರಂದು ಸಂಜೆ 6.30 ಕ್ಕೆ ಪಟ್ಟಣದ ಎಸ್ ಕೆ ಪಬ್ಲಿಕ್ ಶಾಲೆಯ ಚಿನ್ನರ ಭವನದಲ್ಲಿ “ಮಹಿಸಿ ಮರ್ದಿನಿ” ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ತಾಲ್ಲೂಕು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರಾಣಿಕ ಕಥೆ ಒಳಗೊಂಡ ಈ ಯಕ್ಷಗಾನ ಪ್ರದರ್ಶನ ವೀಕ್ಷಿಸಲು ಹಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸುವಂತೆ ಅವರು ತಿಳಿಸಿದರು.
ಹೋಟೆಲ್ ಉದ್ಯಮಿ ಉದಯ ರಘುರಾಮ್ ಶೆಟ್ಟಿ ಮಾತನಾಡಿ, ಧಾರ್ಮಿಕ ಸೇವೆ ಹಾಗೂ ಮನರಂಜನೆ ದೃಷ್ಟಿಯಿಂದ ಕರಾವಳಿ ಭಾಗದ ಖ್ಯಾತ ಯಕ್ಷಗಾನ ಕಲೆಯ ಮಹತ್ವ, ಕನ್ನಡ ಸಾಹಿತ್ಯ ಹಾಗೂ ಧಾರ್ಮಿಕತೆಯನ್ನು ಈ ಭಾಗದಲ್ಲಿಜನನ ತಿಳಿಪಡಿಸಲು
ಯಕ್ಷಗಾನ ಪ್ರದರ್ಶನವನ್ನ ನಮ್ಮ ಹೋಟೆಲ್ ಅಸೋಸಿಯೇಷನ್ ಸಂಘದಿಂದ ಉಚಿತ ಪ್ರವೇಶದೊಂದಿಗೆ ಆಯೋಜಿಸಲಾಗಿದೆ. 30 ಜನರ ತಂಡ ಒಳಗೊಂಡ ಯಕ್ಷಗಾನದಲ್ಲಿ 15 ಜನ ಪಾತ್ರದಾರಿಗಳು ನಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೋಟೆಲ್ ಉದ್ಯಮಿ ದೇವಿಪ್ರಸಾದ್ ವಿಶ್ವನಾಥ ಶೆಟ್ಟಿ ಇದ್ದರು.