Belagavi News In Kannada | News Belgaum

ಕೊರಿಯ‌ರ್​ ಮುಖಾಂತರ ಮಾದಕ ವಸ್ತು ಸಾಗಾಟ: 60 ಲಕ್ಷ ರೂ. ಮೌಲ್ಯದ ವಸ್ತು ವಶ

ಬೆಂಗಳೂರುನಗರದ ದಕ್ಷಿಣ ವಿಭಾಗದ ಬಿ.ವಿ.ಪುರಂ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ 60 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ..

ರಾಜಸ್ಥಾನದಿಂದ ಕೊರಿಯ‌ರ್​ ಮುಖಾಂತರ ಮಾದಕ ವಸ್ತುವಾದ ಓಪಿಎಂ ಪಟ್ಟಿಯನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಅದನ್ನು ಮನೆಯಲ್ಲಿ ಮಿಕ್ಸ್‌‌ ಡ್ರೈಂಡರ್ ಮೂಲಕ ಪುಡಿಮಾಡಿ ರಾತ್ರಿ ಪೂರಾ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ನೀರನ್ನು ಪಾರ್ಟಿ ಮತ್ತು ಇತರೆ ಮೋಜು-ಮಸ್ತಿಯ ಕೂಟಗಳಲ್ಲಿ ಬರುವ ‘ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಇಂಜಿನಿಯರುಗಳಿಗೆ

ನೀಡುತ್ತಿರುತ್ತಾರೆ. ಈ ಪುಡಿಯನ್ನು ಸಹ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಈ ಗ್ಯಾಂಗ್​ನ್ನು ಪತ್ತೆ ಹಚ್ಚಿದ ಪೊಲೀಸರು, ರಾಜಸ್ಥಾನ ಮೂಲದ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನು ಮಾರಾಟ ಮಾಡಲು ಇಟ್ಟುಕೊಂಡಿದ್ದ 55 ಕೆ.ಜಿ ಮಾದಕ ವಸ್ತುವನ್ನು ಮತ್ತು ಸಾಗಾಣಿಕೆಗೆ ಬಳಸುತ್ತಿದ್ದ ಒಂದು ಲಗೇಜ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ..