Belagavi News In Kannada | News Belgaum

ಕಿಂಗ್ ಖ್ಯಾತಿಯ ಕೊಬ್ಬರಿ ಹೋರಿ ಇನ್ನಿಲ್ಲ; ರಕ್ಷಣೆಗೆ ಹೋದ ಮಾಲೀಕನೂ ಸಾವು

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಬಹುಮಾನಗಳನ್ನು ಗಳಿಸಿದ್ದ ‘ಬ್ಯಾಡಗಿ ಕಿಂಗ್’ ಖ್ಯಾತಿಯ ಕೊಬ್ಬರಿ ಹೋರಿ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದು, ಈ ಸಂದರ್ಭದಲ್ಲಿ ಅದರ ರಕ್ಷಣೆಗೆ ಹೋದ ಮಾಲೀಕ ಸಹ ಸಾವಿಗೀಡಾಗಿದ್ದಾರೆ.

ಈ ಘಟನೆ ಬುಧವಾರದಂದು ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಮಲ್ಲೂರ ಗ್ರಾಮದ ಹೊಲದಲ್ಲಿ ನಡೆದಿದ್ದು, 22 ವರ್ಷದ ಸಂತೋಷಗೌಡ ಪ್ರಭುಗೌಡ ಹೊಮ್ಮರಡಿ ರಂಟಿ ಹೊಡೆದು ಸಾಲು ಮಾಡುತ್ತಿದ್ದ ವೇಳೆ ಹೋರಿಯ ಕೊಂಬಿಗೆ ಕೊಳವೆ ಬಾವಿಗೆ ಅಳವಡಿಸಿದ್ದ ಸರ್ವಿಸ್ ವೈರ್ ಸಿಲುಕಿಕೊಂಡಿದೆ.

ಈ ಸಂದರ್ಭದಲ್ಲಿ ಹೋರಿಗೆ ವಿದ್ಯುತ್ ಸ್ಪರ್ಶವಾಗಿ ಅದು ಒದ್ದಾಡಲಾರಂಭಿಸಿದ್ದು, ಆದರೆ ಇದು ಮಾಲೀಕ ಸಂತೋಷ್ ಗಮನಕ್ಕೆ ಬಾರದ ಕಾರಣ ಅವರು ಹೋರಿಯ ಕೊಂಬಿಗೆ ಸಿಲುಕಿದ್ದ ತಂತಿ ಬಿಡಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಹೋರಿಯ ಜೊತೆಗೆ ಸಂತೋಷ್ ಕೂಡ ಮೃತಪಟ್ಟಿದ್ದಾರೆ.