Belagavi News In Kannada | News Belgaum

ಸರ್ಕಾರ ಕೊಟ್ಟ ಹಣವನ್ನು ಸಮಾಜಕ್ಕೆ ವಿನಿಯೋಗ ಮಾಡಿದ ಶಾಸಕ-ಇವರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತ

ಮೊದಲ ವೇತನವನ್ನು ಗ್ರಂಥಾಲಯಕ್ಕೆ ಕೊಟ್ಟ ಸವದತ್ತಿ ಶಾಸಕ ವಿಶ್ವಾಸ ವೈದ್ಯ

ಬೆಳಗಾವಿ: ವೇತನ, ಭತ್ಯೆ ಹೆಚ್ಚಳಕ್ಕೆ ಪಟ್ಟು ಹಿಡಿದು ತಮ್ಮ ತಿಜೋರಿ ತುಂಬಿಸಿಕೊಳ್ಳುವವರೇ ಸಮಾಜದಲ್ಲಿ ತುಂಬಿರುವಾಗ, ಶಾಸಕರೊಬ್ಬರು ಸರ್ಕಾರ ತಮಗೆ ನೀಡಿದ್ದ ಮೊದಲ ಭತ್ಯೆಯ ಅಷ್ಟೂ ಮೊತ್ತವನ್ನು ಗ್ರಂಥಾಲಯಕ್ಕೆ ನೀಡಿ ವೃತ್ತಿ ಔನ್ನತ್ಯ ಮೆರೆದಿದ್ದಾರೆ…

ಹೌದು….  ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಶಾಸಕ  ವಿಶ್ವಾಸ ವೈದ್ಯ ಅವರು ಇಂತಹದ್ದೊಂದು ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.  ಸವದತ್ತಿ ಕ್ಷೇತ್ರದ ಶಾಸಕರಾಗಿ ಮೊದಲ ಭಾರಿಗೆ ಆಯ್ಕೆಯಾದ ವಿಶ್ವಾಸ ವೈದ್ಯ ಅವರು ತಮ್ಮ ಮೊದಲ ವೇತನವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸವದತ್ತಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿರುವ‌ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿ ಕ್ಷೇತ್ರದ ಜನತೆಗೆ  ಸಹಾಯ ಮಾಡುವಲ್ಲಿ ಸದಾ ಮುಂದಿರುವ ವ್ಯಕ್ತಿಯಾಗಿದ್ದು, ಜನರ ಮನಸ್ಸಿನಲ್ಲಿ ನೆಲೆಯುರಿದ್ದಾರೆ.  ..

ಸವದತ್ತಿ ಕ್ಷೇತ್ರಕ್ಕೆ ಮೊದಲ ಭಾರಿ ಶಾಸಕರಾಗಿ ಆಯ್ಕೆಯಾದ ವಿಶ್ವಾಸ ವೈದ್ಯ ಅವರು ತಮಗೆ  ಮೊದಲ ಬಂದ  ವೇತನದಲ್ಲಿ ನಯಾಪೈಸೆಯನ್ನೂ ಸ್ವಂತಕ್ಕೆ ಬಳಸಿಕೊಳ್ಳದೆ  ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಪುಸ್ತಕಗಳನ್ನು ಖರೀದಿಸಲು ಸವದತ್ತಿಯಲ್ಲಿರುವ ಗ್ರಂಥಾಲಯಕ್ಕೆ ನೀಡಿದ್ದಾರೆ. ಇವರ ಈ ಕಾರ್ಯಕ್ಕೆ ಸವದತ್ತಿ ಕ್ಷೇತ್ರವಲ್ಲದೇ ರಾಜ್ಯದ ವಿವಿಧೆಡೆ ಮೆಚ್ಚುಗೆ ವ್ಯಕ್ತವಾಗಿದೆ…