Belagavi News In Kannada | News Belgaum

ಪಿಕೆಪಿಎಸ್ ಅಧ್ಯಕ್ಷರಾಗಿ ಎ.ಕೆ.ಪಾಟೀಲ ಆಯ್ಕೆ

ಹುಕ್ಕೇರಿ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎ.ಕೆ.ಪಾಟೀಲ, ಉಪಾಧ್ಯಕ್ಷರಾಗಿ ಗಿರೀಶ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಎ.ಕೆ.ಪಾಟೀಲ ಈ ಸಹಕಾರಿ ಸಂಘಕ್ಕೆ ೬ ನೇ ಸಲ ನಿರ್ದೇಶಕರಾಗಿ, ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ.
ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಈ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಜಯಗೌಡಾ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಮಹಾವೀರ ನಿಲಜಗಿ, ಗುರು ಕುಲಕರ್ಣಿ, ಆಡಳಿತ ಮಂಡಳಿ ನಿರ್ದೇಶಕರಾದ ಸೋಮನಾಥ ಪರಕನಟ್ಟಿ, ಮಹಾದೇವ ಖುಬಾನ್ನಗೋಳ, ಭೀಮಪ್ಪಾ ಅಳವಡೆ, ಬಸಗೌಡಾ ಪಾಟೀಲ, ಗೀತಾ ಚೌಗಲಾ, ಅರವಿಂದ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು./////