ಬಜೆಟ್ ಮಂಡನೆ ವೇಳೆ ಸುಳ್ಳು ಹೇಳಿ ವಿಧಾನಸಭೆ ಪ್ರವೇಶಿಸಿದ ವ್ಯಕ್ತಿ ಬಂಧನ

ಬೆಂಗಳೂರು: ಇಂದು 2023-24ನೇ ಸಾಲಿನ ಬಜೆಟ್ ಮಂಡನೆ ವೇಳೆ ಖಾಸಗಿ ವ್ಯಕ್ತಿಯೋರ್ವ ಎಂಎಲ್ಎ ಹೆಸರು ಬಳಸಿ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಸಂಗತಿಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಆದರೀಗ ಇದೇ ವಿಚಾರವಾಗಿ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಸ್ಪೀಕರ್ಗೆ ದೂರು ನೀಡಿದ್ದಾರೆ. ಸದ್ಯ ವಿಧಾನಸಭೆಯೊಳಕ್ಕೆ ಪ್ರವೇಶಿಸಿದ ಅನಾಮಧೇಯ ವ್ಯಕ್ತಿ ಪೊಲೀಸರ ವಶದಲ್ಲಿದ್ದು ಎಫ್ಐಆರ್ ಕೂಡ ದಾಖಲಾಗಿದೆ. ಅನಾಮಧೇಯ ವ್ಯಕ್ತಿಯ ವಿಚಾರಣೆ ಕೂಡ ನಡೆಯುತ್ತಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ.
ಯಾರು ಗೊತ್ತಾ ಈ ವ್ಯಕ್ತಿ? ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ ಚಿತ್ರದುರ್ಗದ ಮೊಳಕಾಲ್ಮೂರಿನ ತಿಪ್ಪೇರುದ್ರ ಎಂಬ ವ್ಯಕ್ತಿಯಿಂದ ವಿಧಾಸಸಭೆಗೆ ಪ್ರವೇಶ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎಪ್ಪತ್ತು ವರ್ಷದ ತಿಪ್ಪೇರುದ್ರ ಎಂಬ ವ್ಯಕ್ತಿ ವಿಧಾನಸಭೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಯಾವ ದಾಖಲೆ ನೀಡಿ ಒಳಪ್ರವೇಶಿಸಿದ್ರು? ತಿಪ್ಪೇರುದ್ರ ಅವರ ಮತ್ತೊಂದು ಹೆಸರು ಕರಿಯಪ್ಪ ಎಂದಾಗಿದ್ದು, ಯಾವ ಎಂಎಲ್ಎ ಹೆಸರು ಬಳಸಿ ಒಳ ಹೋಗಿದ್ದರು? ಆಸನದಲ್ಲಿ ಕುಳಿತುಕೊಂಡಿದ್ದು ಹೇಗೆ..? ಯಾವ ದಾಖಲೆಗಳು ಆತನ ಬಳಿಯಿದ್ದವು ಎಂಬ ಕುರಿತಾಗಿ ವಿಚಾರಣೆ ನಡೆಯುತ್ತಿದೆ. ಪೊಲೀಸ್ ಕಮಿಷನರ್ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದಾರೆ. ಖುದ್ದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪರಿಂದ ವಿಚಾರಣೆ ನಡೆಯುತ್ತಿದೆ./////