ಹುಕ್ಕೇರಿ ಪುರಸಭೆ ಮುಖ್ಯಾಧಿಕಾರಿಯಾಗಿ ಬೆಣ್ಣಿ ನೇಮಕ.

ಹುಕ್ಕೇರಿ : ಇಲ್ಲಿನ ಪುರಸಭೆ ಮುಖ್ಯಾಧಿಕಾರಿಯಾಗಿ ಕಿಶೋರ್ ಬೆಣ್ಣಿ ಅವರನ್ನು ನೇಮಕ ಮಾಡಲಾಗಿದೆ.
ಸದ್ಯ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜಶ್ರೀ ತುಂಗಳ ಅವರು ವರ್ಗಾವಣೆಯಾದ ಪ್ರಯುಕ್ತ ಈ ಹುದ್ದೆ ತೆರವಾಗಿತ್ತು..
ತೆರವಾದ ಈ ಸ್ಥಾನಕ್ಕೆ ಕಿಶೋರ್ ಬೆಣ್ಣಿ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆದೇಶ ಹೊರಡಿಸಿದ್ದಾರೆ..
ಇಲ್ಲಿಗೆ ನಿಯೋಜನೆಗೊಳ್ಳುವ ಮೊದಲು ಬೆಣ್ಣಿ ಅವರು ಯರಗಟ್ಟಿ ಪಟ್ಟಣ ಪಂಚಾಯತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.