Belagavi News In Kannada | News Belgaum

ಹುಕ್ಕೇರಿ ತಾಲೂಕಿನಲ್ಲಿ ಡಬಲ್ ಮರ್ಡರ್ ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಡಬಲ್  ಮರ್ಡರ್ ರಾತ್ರಿ ಮಲಗಿದ್ದ ವೇಳೆ ಕೊಲೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊಲೆಯಾದವರ ಮಗಳು ತೇಜಸ್ವಿನಿ ಜಾ ನವಲಗಟ್ಟಿ, ಸಾ|| ಪಾಶ್ಚಾಪೂರ, ತಾ| ಹುಕ್ಕೇರಿ ಹಾಲಿ ಪಿಗ್ಯಾ 2 ನೇ ಸ್ಟೇಜ್ ಬೆಂಗಳೂರು

ಇವರು ಪಿರಿಯಾದಿಯ ನಂತರ ಯಮಕನಮರಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೆಚ್ಚುವರಿ ಎಸ್.ಪಿ.ಬೆಳಗಾವಿ, ಡಿ.ಎಸ್.ಪಿ ಗೋಕಾಕ ಉಪ ವಿಭಾಗ, ಡಿ.ಎಸ್.ಪಿ.ಡಿ.ಸಿ.ಆರ್.ಬಿ. ಸಿ.ಪಿ.ಐ ಹುಕ್ಕೇರಿ ವೃತ್ತ ಇವರುಗಳ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಿದ್ದಾರೆ.

ಸಾರಾಂಶ: ಇದರಲ್ಲಿ ಪಿರ್ಯಾದಿಯ ತಂದೆ ಗಜೇಂದ್ರ ಈರಪ್ಪಾ ಹುನ್ನೂರ, ವಯಸ್ಸು 60 ವರ್ಷ, ಹಾಗೂ ತಾಯಿ ದಾಕ್ಷಾಯಣಿ ಗಜೇಂದ್ರ ಹುನ್ನೂರ, ವಯಸ್ಸು 45 ವರ್ಷ, ಇವರು ಮಾವನೂರ ಗ್ರಾಮದಲ್ಲಿರುವ ಆವರ ಮನೆಯಲ್ಲಿ ಮಲಗಿಕೊಂಡಿದ್ದಾಗ ಜೂ 07-07-2023 ರಂದು ಮುಂಜಾನೆ 08 ಗಂಟೆಯಿಂದ ದಿ|| 08-07- 2023 ರಂದು ರಾತ್ರಿ 2 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಆರೋಪಿತರು ಯಾವುದೋ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಇದರಲ್ಲಿ ಪಿರ್ಯಾದಿಯ ತಂದೆ, ತಾಯಿ ವಾಸವಾಗಿರುವ ಮನೆಯಲ್ಲಿ ಆತಿಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ತಂದೆ, ತಾಯಿಗೆ ಯಾವುದೋ ಹರಿತವಾದ ಆಯುಧಗಳಿಂದ ಮುಖ ಹಗೂ ತಲೆಯ ಮೇಲೆ ಕಡಿದು ಕೊಲೆ ಮಾಡಿರುತ್ತಾರೆ ಅಂತಾ ನಮೂದ ಇದ್ದ ಪಿರ್ಯಾದಿಯನ್ನು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಯಮುಕನಮರಡಿ ಪೊಲೀಸರು ತನಿಖೆ  ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ನಂತರ ಆರೋಪಿಗಳ ಸಳಿವು ಸಿಗಲಿದೆ ಸದ್ದೇ ಈ ಕೊಲೆ ಮಾಡಿರುವ ಆರೋಪಿಗಳು ಯಾರೆಂದು ತಿಳಿದು ಬಂದಿಲ್ಲಾ