ಹೆಂಡತಿಯನ್ನು ಕೊಲೆಗೈದು ಪರಾರಿಯಾದ ಆರೋಪಿನ್ನು ಪತ್ತೆ ಹಚ್ಚುವಲ್ಲಿ ಕಸಬಾಪೇಟ ಪೋಲಿಸರು ಪಿ ಐ ಯಶಸ್ವಿ

ಹುಬ್ಬಳ್ಳಿ: ಕಸಬಾಪೇಟ ಪೋಲಿಸರ. ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಕೊಲೆಗಾರ ಗಂಡನನ್ನು ಬಂದನ ಮಾಡುವಲ್ಲಿ ಕೊನೆಗೂ ಹುಬ್ಬಳ್ಳಿಯ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ರವಿವಾರ ನೇಕಾರ ನಗರದ ಬಸವೇಶ್ವರ ಕಾಲೋನಿಯಲ್ಲಿನ ಬಾಡಿಗೆ ಮನೆಯಲ್ಲಿ ಹೆಂಡತಿ ಸುಧಾಳೊಂದಿಗೆ ವಾಸವಿದ್ದ ಶಿವಯ್ಯ ತಡ ರಾತ್ರಿ ಮಲಗಿದ್ದ ಸುಧಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.ಆದ್ರೆ ಕೊಲೆ ಮಾಡಿ ಪರಾರಿಯಾಗಿದ್ದ ಶಿವಯ್ಯ ಮೊಬೈಲ್ ಕೂಡಾ ಮನೆಯಲ್ಲಿಯೇ ಬಿಟ್ಟು ಹೋಗಿದ್ದ ಹೀಗಾಗಿ ಈತ ಎಲ್ಲಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಗದೆ ಬಾರಿ ತಲೆನೋವಾಗಿತ್ತು.
ಆದ್ರೆ ಈತನ ಪತ್ತೆಗೆ ಇನ್ಸೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಸತತ ಪ್ರಯತ್ನದಿಂದ ಆರೋಪಿಯನ್ನು ಬೇರೆ ಜಿಲ್ಲೆಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಸದ್ಯ ಕೊಲೆ ಮಾಡಿದ ಆರೋಪಿಯನ್ನು ಇದೀಗ ನಗರಕ್ಕೆ
ತರುತ್ತಿದ್ದಾರೆ.