ಹುಕ್ಕೇರಿ ಪಿಎಲ್‍ಡಿ ಬ್ಯಾಂಕ್‍ಗೆ ಅವಿರೋಧ ಆಯ್ಕೆ

ಹುಕ್ಕೇರಿ : ಇಲ್ಲಿನ ದಿ.ಹುಕ್ಕೇರಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‍ಡಿ)ನ 2023-28ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 15 ಸ್ಥಾನಗಳ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಪಿಎಲ್‍ಡಿ ಬ್ಯಾಂಕ್‍ನ ಒಟ್ಟು 15 ಸ್ಥಾನಗಳ ನಿರ್ದೇಶಕ ಹುದ್ದೆಗಳಿಗೆ ಆಯ್ಕೆ ಬಯಸಿ 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ರವಿವಾರ 6 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದರು. ಹೀಗಾಗಿ ಸ್ಪರ್ಧಾ ಕಣದಲ್ಲಿ ಉಳಿದ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಸಹಕಾರ ಇಲಾಖೆಯ ಸಿಡಿಒ ಶಕುಂತಲಾ ಪಾಟೀಲ ಚುನಾವಣಾಧಿಕಾರಿಯಾಗಿ, ನಾಗರತ್ನಾ ಹೆಬ್ಬಾಳಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕ ನಿಖಿಲ್ ಕತ್ತಿ ಮಾರ್ಗದರ್ಶನದಲ್ಲಿ ಈ ಅವಿರೋಧ ಆಯ್ಕೆ ನಡೆದಿದೆ.
ಬೆಲ್ಲದ ಬಾಗೇವಾಡಿ ಕ್ಷೇತ್ರದಿಂದ ಬಾಳಾಸಾಹೇಬ ನಾಯಿಕ, ದಡ್ಡಿ ಕ್ಷೇತ್ರದಿಂದ ರಾಹುಲ ಮುಂಗರವಾಡಿ, ಹೆಬ್ಬಾಳ ಕ್ಷೇತ್ರದಿಂದ ಅಪ್ಪಾಸಾಹೇಬ ಸಂಕನ್ನವರ, ಸೊಲ್ಲಾಪುರ ಕ್ಷೇತ್ರದಿಂದ ಚನ್ನಪ್ಪ ಕೋರಿ, ಕಣಗಲಾ ಕ್ಷೇತ್ರದಿಂದ ಪ್ರಮೋದ ಕುಲಕರ್ಣಿ, ನಿಡಸೋಸಿ ಕ್ಷೇತ್ರದಿಂದ ಶಂಕರ ಗೋಟೂರಿ, ನೇರ್ಲಿ ಕ್ಷೇತ್ರದಿಂದ ಬಾಬಾಸಾಹೇಬ ಪಾಟೀಲ, ಘೋಡಗೇರಿ ಕ್ಷೇತ್ರದಿಂದ ರಾಚಯ್ಯ ಹಿರೇಮಠ (ಸಾಮಾನ್ಯ ವರ್ಗ), ಪಾಶ್ಚಾಪುರ ಕ್ಷೇತ್ರದಿಂದ ದುರದುಂಡಿ ಪಾಟೀಲ (ಹಿಂದುಳಿದ ಎ ವರ್ಗ), ಯಾದಗೂಡ
ಕ್ಷೇತ್ರದಿಂದ ಶೀತಲ ಬ್ಯಾಳಿ (ಹಿಂದುಳಿದ ಬ ವರ್ಗ), ಬಿನ್ ಸಾಲಗಾರ ಕ್ಷೇತ್ರದಿಂದ ಪರಗೌಡ ಪಾಟೀಲ, ಹುಕ್ಕೇರಿ ಕ್ಷೇತ್ರದಿಂದ ಸುಶೀಲಾ ಕೋರಿ, ಯಮಕನಮರಡಿ ಕ್ಷೇತ್ರದಿಂದ ಸುನೀತಾ ಬೆಣಿವಾಡಿ (ಮಹಿಳಾ ಮೀಸಲು), ಶಿರಗಾಂವ ಕ್ಷೇತ್ರದಿಂದ ಗುರಪ್ಪಾ ತಳವಾರ (ಪರಿಶಿಷ್ಟ ಜಾತಿ ಮೀಸಲು), ಇಸ್ಲಾಂಪುರ ಕ್ಷೇತ್ರದಿಂದ ಅಡಿವೆಪ್ಪಾ ನಾಯಿಕ (ಪರಿಶಿಷ್ಟ ಪಂಗಡ ಮೀಸಲು) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.