ಸೆಬಿʼಗೆ ʻಡಿಆರ್‌ಎಚ್‌ಪಿʼ ಸಲ್ಲಿಸಿದ ಎನ್ಎಸ್‌ಡಿಎಲ್

ಹುಬ್ಬಳ್ಳಿ : ಭಾರತದ ಹಣಕಾಸು ಮತ್ತು ಸೆಕ್ಯುರಿಟಿಸ್ ಮಾರುಕಟ್ಟೆಗಳಿಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವ, ʻಸೆಬಿʼ ನೋಂದಾಯಿತ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಯಾದ ʻನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ʼ(ಎನ್ಎಸ್‌ಡಿಎಲ್) ತನ್ನ ʻಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್(ಡಿಆರ್‌ಎಚ್‌ಪಿ) ಅನ್ನು ʻಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾʼ(ಸೆಬಿ)ಗೆ ಸಲ್ಲಿಸಿದೆ.
1996 ರಲ್ಲಿ ʻಡಿಪಾಸಿಟರಿ ಕಾಯ್ದೆʼಯನ್ನು ಪರಿಚಯಿಸಿದ ನಂತರ, ನವೆಂಬರ್ 1996ರಲ್ಲಿ ಭಾರತದಲ್ಲಿ ಸೆಕ್ಯುರಿಟಿಸ್‌ಗಳ ವಿದ್ಯುನ್ಮಾನ ರೂಪಾಂತರಕ್ಕೆ (ಡಿಮೆಟಿರಿಯಲೈಸೇಷನ್) ʻಎನ್ಎಸ್‌ಡಿಎಲ್ʼ ನಾಂದಿ ಹಾಡಿತು. ಮಾರ್ಚ್ 31, 2023ರ ಹೊತ್ತಿಗೆ ವಿತರಕರ ಸಂಖ್ಯೆ, ಸಕ್ರಿಯ ಹಣಕಾಸು ಸಾಧನಗಳ ಸಂಖ್ಯೆ, ಇತ್ಯರ್ಥವಾಗುವ ಪರಿಮಾಣದ ಡಿಮ್ಯಾಟ್ ಮೌಲ್ಯದಲ್ಲಿ ಹೊಂದಿರುವ ಮಾರುಕಟ್ಟೆ ಪಾಲು ಹಾಗೂ ವಶದಲ್ಲಿರುವ ಸ್ವತ್ತುಗಳ ಮೌಲ್ಯದ ವಿಷಯದಲ್ಲಿ ಕಂಪನಿಯು ಭಾರತದ ಅತಿದೊಡ್ಡ ಡಿಪಾಸಿಟರಿಯಾಗಿದೆ.
ತಲಾ 2 ರೂ.ಗಳ ಮುಖಬೆಲೆಯ ಈಕ್ವಿಟಿ ಷೇರುಗಳ ವಿತರಣೆಯೊಂದಿಗೆ ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ ಹಣವನ್ನು ಸಂಗ್ರಹಿಸಲು ಕಂಪನಿಯು ಯೋಜಿಸಿದೆ. ಈ ಆಫರ್ (“ಆಫರ್”) 57,260,001 ಈಕ್ವಿಟಿ ಷೇರುಗಳ ಮಾರಾಟದ ಪ್ರಸ್ತಾಪವನ್ನು ಒಳಗೊಂಡಿದೆ (“ಆಫರ್ ಫಾರ್ ಸೇಲ್”).
ಈಕ್ವಿಟಿ ಷೇರುಗಳ ಮಾರಾಟದ ಪ್ರಸ್ತಾಪವು ಐಡಿಬಿಐ ಬ್ಯಾಂಕ್ ಲಿಮಿಟೆಡ್‌ನ 22,220,000 ಈಕ್ವಿಟಿ ಷೇರುಗಳು; ʻನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ʼನಿಂದ 18,000,001 ಈಕ್ವಿಟಿ ಷೇರುಗಳು; ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 5,625,000 ವರೆಗೆ ಈಕ್ವಿಟಿ ಷೇರುಗಳು; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 4,000,000 ವರೆಗೆ ಈಕ್ವಿಟಿ ಷೇರುಗಳು; ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 4,000,000 ವರೆಗೆ ಈಕ್ವಿಟಿ ಷೇರುಗಳು(ಎಸ್‌ಎಸ್); ಯೂನಿಟ್ ಟ್ರಸ್ಟ್ ಆಫ್
ಇಂಡಿಯಾದ ನಿರ್ದಿಷ್ಟ ಘಟಕದ ಆಡಳಿತದಾರರ 3,415,000 ವರೆಗಿನ ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ(ಒಟ್ಟಾರೆಯಾಗಿ “ಮಾರಾಟ ಮಾಡುವ ಷೇರುದಾರರು” ಎಂದು ಉಲ್ಲೇಖಿಸಲಾಗುತ್ತದೆ ಮತ್ತು ಮಾರಾಟ ಮಾಡುವ ಷೇರುದಾರರು ನೀಡುವ ಅಂತಹ ಈಕ್ವಿಟಿ ಷೇರುಗಳು, “ಕೊಡುಗೆಗೆ ಲಭ್ಯವಿರುವ ಷೇರುಗಳು”) (“ಆಫರ್ ಫಾರ್ ಸೇಲ್” ಅಥವಾ “ಆಫರ್”).
ಈ ಕೊಡುಗೆಯು ಅರ್ಹ ಉದ್ಯೋಗಿಗಳ ಚಂದಾದಾರಿಕೆಗಾಗಿ ಈಕ್ವಿಟಿ ಷೇರುಗಳ ಕಾಯ್ದಿರಿಸುವಿಕೆಯನ್ನು ಒಳಗೊಂಡಿದೆ (“ಉದ್ಯೋಗಿ ಮೀಸಲಾತಿ ಭಾಗ”). ಕಂಪನಿ ಮತ್ತು ಮಾರಾಟ ಮಾಡುವ ಷೇರುದಾರರು, ʻಬಿಆರ್‌ಎಲ್‌ಎಂʼಗಳೊಂದಿಗೆ ಸಮಾಲೋಚಿಸಿ, ಉದ್ಯೋಗಿ ಮೀಸಲಾತಿ ಭಾಗದಲ್ಲಿ ಬಿಡ್ ಮಾಡುವ ಅರ್ಹ ಉದ್ಯೋಗಿಗಳಿಗೆ ಕೊಡುಗೆ ಬೆಲೆಯ ರಿಯಾಯಿತಿಯನ್ನು ನೀಡಬಹುದು (“ಉದ್ಯೋಗಿ ರಿಯಾಯಿತಿ”), ಉದ್ಯೋಗಿ ಮೀಸಲಾತಿ ಭಾಗವನ್ನು ಇನ್ನು ಮುಂದೆ “ನಿವ್ವಳ ಕೊಡುಗೆ” ಎಂದು ಕರೆಯಲಾಗುತ್ತದೆ.
ʻರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ʼ ಮೂಲಕ ನೀಡಲಾಗುವ ಈಕ್ವಿಟಿ ಷೇರುಗಳನ್ನು ʻಬಿಎಸ್ಇʼಯಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ.
ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್, ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್ ಅಂಡ್ ಕ್ಯಾಪಿಟಲ್ ಮಾರ್ಕೆಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ಸ್ & ಸೆಕ್ಯುರಿಟೀಸ್ ಲಿಮಿಟೆಡ್, ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಈ ಕೊಡುಗೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ಗಳು.