ಜೈನಮುನಿ ಸಿದ್ದಸೇನ ಮಹಾರಾಜರರನ್ನು ಭೇಟಿಯಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್..

ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಲಗಾ ಗ್ರಾಮದ ಬಸದಿಗೆ ಗೃಹ ಸಚಿವ ಜಿ. ಪರಮೇಶ್ವರ್ ಇಂದು ಭೇಟಿ ನೀಡಿದರು.
ಘಟನೆ ಬಗ್ಗೆ ಜೈನಮುನಿಗಳ ಜತೆ ಗೃಹಸಚಿವರು ಚರ್ಚೆ ಮಾಡಿದ್ದಾರೆ. ಈ ವೇಳೆ ಜೈನಮುನಿ ಸಿದ್ದಸೇನ ಮಹಾರಾಜರು ಮಾತನಾಡಿದ್ದು, ಈ ಘಟನೆಯಿಂದ ಜೈನ ಸಮುದಾಯದ ಜನರಲ್ಲಿ ರೋಷ ಬಂದಿದೆ. ಸಾಧುಸಂತರಿಗೆ ಹೀಗಾದರೆ ಮುಂದೆ ಹೇಗೆ ಅನ್ನೋ ಪ್ರಶ್ನೆ ಮೂಡುತ್ತಿದೆ. ಇನ್ಮುಂದೆ ಈ ರೀತಿ ಘಟನೆ ಆಗಬಾರದು, ಸರ್ಕಾರದಿಂದ ರಕ್ಷಣೆ ಬೇಕು ಎಂದು ಡಾ.ಜಿ. ಪರಮೇಶ್ವರ್ಗೆ ಮನವಿ ಮಾಡಿದರು.
ಘಟನೆ ನಡೆದ 3-4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರಿಗೆ ತಮ್ಮ ಕಡೆಯಿಂದಲೂ ಅಭಿನಂದಿಸುವ ಕೆಲಸ ಮಾಡಿ. ರಾಜ್ಯ ಪೊಲೀಸ್ ಇಲಾಖೆ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಪೊಲೀಸರಿಗೂ ಜೈನ ಸಮುದಾಯ ವತಿಯಿಂದ ಅಭಿನಂದಿಸುತ್ತೇವೆ. ಕರ್ನಾಟಕದಲ್ಲಿ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.