ಮಹಿಳೆಯರ ಸಬಲೀಕರಣದಲ್ಲಿ ಸ್ವ-ಸಹಾಯ ಸಂಘಗಳ ಪಾತ್ರ ಹಿರಿದು

ಹುಕ್ಕೇರಿ: ಸ್ವ-ಸಹಾಯ ಸಂಘಗಳು ಕೇವಲ ಮಹಿಳೆಯರ ಆರ್ಥಿಕ ಪುನಃಶ್ಚೇತನಕ್ಕೆ ಸೀಮಿತವಾಗಿರದೆ ಕುಟುಂಬಗಳ ಸರ್ವಾಂಗೀಣ ವಿಕಸನಕ್ಕೆ ಪೂರಕವಾಗುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಕಿರಣ ಚೌಗಲಾ ಅಭಿಪ್ರಾಯ ಪಟ್ಟರು. ಜೀವನಾಧಾರದಿಂದ ಸುಸ್ಥಿರತೆಗೆ ಬದಲಾಗಲು, ಮಹಿಳೆಯರನ್ನು ಪೋಷಿಸಲು ಮತ್ತು ಬೆಂಬಲಿಸಲು ಸ್ವ-ಸಹಾಯ ಸಂಘಗಳು ಪ್ರಭಾವಶಾಲಿ ಮಾಧ್ಯಮವಾಗಿವೆ ಎಂದರು.
ಇತ್ತೀಚೆಗೆ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸುತ್ತಿವೆ. ಅಂತಹ ಕೌಟುಂಬಿಕ ಸಮಸ್ಯೆಗಳ ನಿವಾರಣೆಗಿರುವ ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಗಳಾದ ಸುಜಾತಾ ವಂದೂರೆ, ಶೃತಿ ಗವನಾಳಿ, ಶ್ರೀಮತಿ ಮಂಗಲ ಕುಂಬಾರ, ಶ್ರೀಮತಿ ಸವಿತಾ ಚವ್ಹಾಣ, ಸುವಿಧಾ ಸಹಾಯಕರಾದ ಶ್ರೀಮತಿ ಲಕ್ಷ್ಮೀ ಬಟವಾಲ, ಉಪಾಧ್ಯಕ್ಷೆ ಶ್ರೀಮತಿ ರೂಪಾ ಬಸ್ತವಾಡ ಹಾಗೂ ಶ್ರೀ ರಮೇಶ ಇವರಲ್ಲದೆ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರರಾದ ಕುಮಾರಿ ಸುಗಂಧಾ ಅಲ್ಲೋಟ್ಟಿ ಉಪಸ್ಥಿತರಿದ್ದರು.
ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಅಕ್ಷಯ ಘೋರ್ಪಡೆ ರೇಡಿಯೋ ಕೇಂದ್ರದಲ್ಲಿ ಸಮುದಾಯದ ಸಹಭಾಗಿತ್ವ ಬಗ್ಗೆ ವಿವರಿಸಿದರು.