ಮುನಿ ಹತ್ಯೆ ಖಂಡಿಸಿ ಚಿಕ್ಕೋಡಿಯಲ್ಲಿ ಬೃಹತ್ ಮೌನ ಪ್ರತಿಭಟನೆ..

ಚಿಕ್ಕೋಡಿ: ಹಿರೇಕೋಡಿ ನಂದಿ ಪರ್ವತದ ಜೈನಮುನಿ ಶ್ರೀ ಆಚರ‍್ಯ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಚಿಕ್ಕೋಡಿಯಲ್ಲಿಂದು ಜೈನ ಸಮಾಜ ಬಾಂಧವರು ಬೃಹತ್ ಮೌನ ಪ್ರತಿಭಟನಾ ರ‍್ಯಾಲಿ ನಡೆಸಿದರು..
ನಿಪ್ಪಾಣಿ, ಚಿಕ್ಕೋಡಿ ರಾಯಬಾಗ, ಅಥಣಿ, ಕಾಗವಾಡ. ಹುಕ್ಕೇರಿ ಹಾಗೂ ನೆರೆಯ ಮಹಾರಾಷ್ಟ್ರದ ನಾಗರಿಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹತ್ಯೆಯಾಗಿರುವ ಜೈನಮುನಿಗಳಿಗೆ ನ್ಯಾಯ ಸಿಗುವಂತೆ ಒತ್ತಾಯಿಸಿದರು.
ಪಟ್ಟಣದ ಆರ್.ಡಿ.ಕಾಲೇಜು ಮೈದಾನದಿಂದ ಆರಂಭವಾದ ಪ್ರತಿಭಟನೆ ಬಸ್ ನಿಲ್ದಾಣ, ಮಹಾವೀರ ಸರ್ಕಲ್, ಎನ್.ಎಂ.ರಸ್ತೆ, ಬಸವ ಸರ್ಕಲ್ ಮಾರ್ಗವಾಗಿ ಮಿನಿವಿಧಾನಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು..
ವರೂರ ಧರ್ಮಸೇನ ಭಟ್ಟಾಚಾರ ಸ್ವಾಮೀಜಿ ಮಾತನಾಡಿ. ಜೈನ ಮುನಿ ಹತ್ಯೆ ಹೇಯ ಕೃತ್ಯ. ಇದು ಜೈನ ಮುನಿಗಳಿಗಷ್ಟೇ ಅಲ್ಲದೇ ಉಳಿದ ಸಮಾಜದ ಎಲ್ಲ ಸ್ವಾಮೀಜಿಗಳೊಂದಿಗೆ ಇಂತಹ ಹೇಯ ಕೃತ್ಯ ನಡೆಯಬಾರದು. ದುಷ್ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು..
ನಾಂದಣಿಯ ಜೀನಸೇನ ಭಟ್ಟಾಚಾರ್ಯ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀಸೇನಾ ಭಟ್ಟಾಚಾರ್ಯ ಸ್ವಾಮೀಜಿ,
ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ವೀರಕುಮಾರ ಪಾಟೀಲ, ಮೋಹನ ಶಹಾ, ವರ್ಧಮಾನ ಸದಲಗೆ, ರಣಜೀತ ಸಂಗ್ರೊಳ್ಳೆ, ಅನಿಲ ಸದಲಗೆ, ಉತ್ತಮ ಪಾಟೀಲ, ಡಾ.ಪದ್ಮರಾಜ ಪಾಟೀಲ, ಬಸವಪ್ರಸಾದ ಜೊಲ್ಲೆ, ರಾಜು ಖಿಚಡೆ, ರವಿ ಹಂಪನ್ನವರ, ಡಾ.ಎನ್.ಎ. ಮಗದುಮ್ಮ, ಸಂಜಯ ಪಾಟೀಲ, ಭರತೇಶ ಬನವನೆ, ಎಸ್.ಟಿ. ಮುನ್ನೋಳ್ಳಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು..