ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಬೇಟಿಯಾಗಿ ಚರ್ಚೆ ನಡೆಸಿದ ಮಾಜಿ ಶಾಸಕ ಅನಿಲ ಬೆನಕೆ

ಬೆಳಗಾವಿ 10 : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಬೇಟಿಯಾಗಿ ಚರ್ಚೆ ನಡೆಸಿದ ಮಾಜಿ ಶಾಸಕ ಅನಿಲ ಬೆನಕೆ :
ದಿನಾಂಕ 10.07.2023 ರಂದು ಭಾರತ ಸರ್ಕಾರದ ಕಲ್ಲಿದ್ದಿಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆರವರು ಬೇಟಿ ನೀಡಿದರು. ಪ್ರಹ್ಲಾದ ಜೋಶಿ ಅವರು ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯ ರಾಜ್ಯದ ಪ್ರಭಾರಿಯಾಗಿ ನೇಮಕಗೊಂಡಿದ್ದಕ್ಕಾಗಿ ಅವರನ್ನು ಈ ವೇಳೆ ಅಭಿನಂದಿಸಿದರು.
ಪ್ರಧಾನಿ ನರೇಂದ್ರ ಮೋದಿಜಿರವರ ಕನಸಿನ ಯೋಜನೆಯಾದ ವಂದೇ ಭಾರತ ರೈಲನ್ನು ಬೆಳಗಾವಿಯಿಂದ ಮುಂಬೈಗೆ ವಿಸ್ತರಿಸುವಂತೆ ಮನವಿ ಮಾಡಿದರು ಮತ್ತು ಬೆಳಗಾವಿ ವಿಮಾನ ನಿಲ್ದಾಣದ ಅಭಿವೃಧ್ದಿ ಕುರಿತು ಚರ್ಚಿಸಿದರಲ್ಲದೆ ಬೆಳಗಾವಿಯಿಂದ ನವ ದೆಹಲಿಗೆ ವಿಮಾನ ಸೇವೆಯನ್ನು ಪುನರಾರಂಭಿಸುವ ಕುರಿತು ಚರ್ಚೆ ನಡೆಸಿದರು. ಈ ವೇಳೆ ಸಚಿವರು ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು..