Belagavi News In Kannada | News Belgaum

ಸ್ವಾಮೀಜಿ ನಾಲ್ಕು ಬೇಡಿಕೆಗೆ ಗೃಹ ಸಚಿವ ಪರಮೇಶ್ವರ ಸ್ಪಂದನೆ

ಹುಬ್ಬಳ್ಳಿ: ಜೈನ್ ಮುನಿಗಳ ಹತ್ಯೆಯಂತಹ ಘಟನೆ ನಡೆದಾಗ ಯಾರು ಕೂಡ ತಾರತಮ್ಯ ಮಾಡುವುದಕ್ಕೆ ಆಗುವುದಿಲ್ಲ. ಈ ಪ್ರಕರಣವನ್ನ ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ. ನಮ್ಮ ಪೋಲಿಸರು ಸಮರ್ಥರಿದ್ದಾರೆ ಎಂದು ಗೃಹ ಸಚಿ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ..

 

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನಮುನಿ ಗುಣಧರನಂದಿ‌ ಮಹಾರಾಜರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಹತ್ಯೆಯ ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡುತ್ತಾರೆ. ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣದ ತನಿಖೆಯಲ್ಲಿ ತಾರತಮ್ಯದ ಆರೋಪ ವಿಚಾರ ನನಗೂ ಬೇಜಾರು ತಂದಿದ್ದು, ಅದರಲ್ಲಿ ತಾರತಮ್ಯದ ಪ್ರಶ್ನೆ ಬರುವುದಿಲ್ಲ. .

 

ಘಟನೆ ನಡೆದ ಮೇಲೆ ಪೊಲೀಸರಿಗೆ ವಿಚಾರ ಗೊತ್ತಾಗಿ ಕಂಪ್ಲೇಂಟ್ ಆದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರೂ, ಬೋರ್ವೆಲ್ ನಲ್ಲಿ ಹಾಕಿದಂತ ದೇಹವನ್ನು ತೆಗೆಸಿ ಕ್ರಮ ತೆಗೆದುಕೊಂಡಿದ್ದಾರೆ ಇದು ಅತ್ಯಂತ ವೇಗವಾಗಿ ನಡೆದಿದ್ದು, ನಮ್ಮ ಇಲಾಖೆಗೆ ಅಭಿನಂದನೆ ಹೇಳ್ತೇನೆ ಅವರು ಶೀಘ್ರವಾಗಿ ಮಾಡಿದ್ದಾರೆ ಎಂದರು..

 

ಇನ್ನು ಹುಬ್ಬಳ್ಳಿಯಲ್ಲಿನ ಜೈನ ಮುನಿಗಳು ಉಪವಾಸ ಮಾಡಿದರು. ಅವರೊಂದಿಗೆ ನಿನ್ನೆ ನಾನು ಸಹ ಮಾತನಾಡಿದ್ದೇನೆ, ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡೋಕೆ ಬಂದಿದ್ದೇವೆ ಎಂದ ಅವರು, ಸಿಬಿಐ ತನಿಖೆಗೆ ಕೊಡಿ ಎಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಆರಂಭ ಆಗಿದೆ, ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ ಎಂದರು..

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಇಲಾಖೆ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ತಿಳಿದು ಬರುತ್ತೆ. ಸುಮ್ನೆ ಆಪಧನೆ ಮಾಡುವುದು ಸರಿಯಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಪಕ್ಷಾತೀತವಾಗಿ ಪ್ರೆಶರ್ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು..