ಬೈಕ್ ಸ್ಕಿಡ್; ಘಟಪ್ರಭಾ ನದಿ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು ಸವಾರರು..

ಗೋಕಾಕ: ಘಟಪ್ರಭಾ ನದಿಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮೂಡಲಗಿ ತಾಲೂಕಿನ ಔರಾದಿ ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್ ನ ಹೊರ ವಲಯದಲ್ಲಿ ನಡೆದಿದೆ. .
ನೀರಿನ ಕೊಚ್ಚಿ ಹೋದವರು ಔರಾದಿ ಗ್ರಾಮದ ಚನ್ನಪ್ಪ ಹರಿಜನ (38) ಹಾಗೂ ದುರ್ಗಿಣಿ ಹರಿಜನ (35) ಎಂಬುವವರು.
ಮೂಡಲಗಿಯಿಂದ ವೈಯಕ್ತಿಕ ಕೆಲಸಕ್ಕಾಗಿ ಮಹಾಲಿಂಗಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ..
ಸ್ಥಳೀಯರು ರಕ್ಷಿಸಲು ಹರಸಾಹಸ ಪಟ್ಟರೂ ಬೈಕ್ ಸವಾರರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದಾರೆ..
ಸ್ಕಿಡ್ ಆಗಿ ನದಿಗೆ ಬಿದ್ದ ಬೈಕ್ ನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಈ ಕುರಿತು ಕುಲಗೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..