Belagavi News In Kannada | News Belgaum

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದೇವನೂರು ಮಠದ ಸ್ವಾಮೀಜಿ

ಮೈಸೂರು: ಕಾವೇರಿ ನದಿಗೆ ಹಾರಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಟಿ.ನರಸೀಪುರ ತಾಲೂಕಿನ ಮೂಡುಕುತೊರೆಯ ಬಳಿ ನಡೆದಿದೆ. ಶಿವಪ್ಪ ದೇವರು (60) ಮೃತ ಸ್ವಾಮೀಜಿ..

 

ಮೃತ ಸ್ವಾಮೀಜಿ ನಂಜನಗೂಡಿನ ದೇವನೂರು ಮಠದ ಸ್ವಾಮೀಜಿ ಶಿಷ್ಯರಾಗಿದ್ದರು. ಕಳೆದೆರಡು ದಿನದಿಂದ ಸ್ವಾಮೀಜಿ ಶಿವಪ್ಪ ದೇವರು ನಾಪತ್ತೆಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ‌. ಮಠ ಹಾಗೂ ಭಕ್ತರಲ್ಲಿ ಉತ್ತಮ ಹೆಸರನ್ನು ಗಳಸಿಕೊಂಡಿದ್ದರು. ಮೃತ ಸ್ವಾಮೀಜಿ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಲಿವೂರು ಗ್ರಾಮದವರು..

 

ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಲಕಾಡು ಪೊಲೀಸರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.