ಕೃತಕ ಆಭರಣಗಳ ತಯಾರಿಕೆ ಹಾಗೂ ಕೋಳಿ ಸಾಕಾಣಿಕೆ ಅರ್ಜಿ ಅಹ್ವಾನ
ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯಗಾರ

ನೇರ ಸಂದರ್ಶನ ರದ್ದು
ಬೆಳಗಾವಿ, ಜು.10 : ಎನ್.ಪಿ.ಸಿ.ಡಿ.ಸಿ.ಸ್- ಎನ್.ಪಿ.ಹೆಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ/ಕಿಯರು ಹಾಗೂ ಆಪ್ತ ಸಮಾಲೋಚಕರ ನೇಮಕಾತಿ ಪ್ರಕಟಣೆಯನ್ನು ಜೂ.26 2023 ರಂದು ಪ್ರಕಟಿಸಲಾಗಿತ್ತು.
ಆದರೆ ನೇರ ಗುತ್ತಿಗೆ ನೇಮಕಾತಿಯ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸಿ ಘನ ಉಚ್ಛ ನ್ಯಾಯಾಲಯ ಮತ್ತು ಘನ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರುವ ಕಾರಣ ಜು. 11 2023 ರಂದು ನಡೆಸಲು ಉದ್ದೇಶಿಸಿದ ನೇರ ಸಂದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು, ನೇಮಕಾತಿ ಸಮೀತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಕೃತಕ ಆಭರಣಗಳ ತಯಾರಿಕೆ ಹಾಗೂ ಕೋಳಿ ಸಾಕಾಣಿಕೆ ಅರ್ಜಿ ಅಹ್ವಾನ
ಬೆಳಗಾವಿ, ಜು.10 : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೃತಕ ಆಭರಣಗಳ ತಯಾರಿಕೆಯ(Costume Jewelry Udyami)13 ದಿನಗಳ ತರಬೇತಿ ಮತ್ತು ಕೋಳಿ ಸಾಕಾಣಿಕೆ(Poultry) 10 ದಿನಗಳ ತರಬೇತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹತೆಗಳು: 18 ರಿಂದ 45 ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿರಬೇಕು, BPL/ಜಾಬ್ ಕಾರ್ಡ ಹೊಂದಿರಬೇಕು.
ದಾಖಲೆಗಳು: BPL/ ಜಾಬ್ ಕಾರ್ಡ, ಆಧಾರ ಕಾರ್ಡ,ಬ್ಯಾಂಕ ಪಾಸ್ ಬುಕ್ಕ, 3 ಭಾವಚಿತ್ರಗಳುನ್ನು ಸಲ್ಲಿಸಬೇಕು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಗೆ ಅರ್ಜಿ ನೀಡುವವರು ಕೃತಕ ಆಭರಣಗಳ ತಯಾರಿಕೆ ಮತ್ತು ಕೋಳಿ ಸಾಕಾಣಿಕೆ, ಈ ಎರಡು ತರಬೇತಿಯಲ್ಲಿ ಒಂದು ತರಬೇತಿಗೆ ಅರ್ಜಿ ನೀಡುಬಹುದು.
ಜು. 16 2023, ರ ಒಳಗಾಗಿ ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಇಮೇಲ್ cbrsetibelagavi@gmail.com ಗೆ ಕಳುಹಿಸಬಹುದಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ, ನಿರುದ್ಯೋಗಿಗಳಿಗೆ, ಮತ್ತು ಮಹಿಳಾ ನಿರುದ್ಯೋಗಿಗಳಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ), ಪ್ಲಾಟ ನಂ. ಸಿ ಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಎರಿಯಾ, ಆಟೋ ನಗರ. – 590015 ಅಥವಾ ದೂರವಾಣಿ ಸಂಪರ್ಕ ಸಂಖ್ಯೆ: 0831-2440644, 8296792166, 9845750043, 8867388906, 8050406866, 9449860564 ನಂ. ಗೆ ಬೆಳ್ಳಿಗ್ಗೆ 9.30 ರಿಂದ ಸಾಯಂಕಾಲ 6. ಗಂಟೆ ವರೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ: “ಮಿನಿ ಉದ್ಯೋಗ ಮೇಳ”
ಬೆಳಗಾವಿ, ಜು.10 : ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಜು. 13 2023 ರಂದು ಮುಂಜಾನೆ 9 ರಿಂದ ಮದ್ಯಾಹ್ನ 1.30 ಗಂಟೆಯವರೆಗೆ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾಮತ್ತು ಡಿ-ಪಾರ್ಮಾಸಿ, ಡಿಎಚ್‍ಐ ಹಾಗೂ ಯಾವದೇ ಪದವಿ ಮತ್ತು ಯಾವುದೇ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ “ಮಿನಿ ಉದ್ಯೋಗ ಮೇಳ” ವನ್ನು (Mini Job Fair) ಬೆಳಗಾವಿಯ ಬೆನನ್ ಸ್ಮಿತ್ ಮೆಥೋಡಿಸ್ಟ್ ಪದವಿ ಕಾಲೇಜನಲ್ಲಿ ಆಯೋಜಿಸಲಾಗಿದೆ.
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು https://forms.gle/ /ಖಿvಜಙ2qಚಿಃಣiಇಗಿ7esಛಿ8 ಈ ವೆಬ್‍ಸೈಟ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಮಿನಿ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ 7ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಳಿಗಾಗಿ ವೈಬ್‍ಸೈಟ https://forms.gle/TvdY2qaBtiEV7esc8 ಗೆ ಭೇಟಿ ನೀಡಬಹುದಾಗಿದೆ ಹಾಗೂ ಮೊಬೈಲ್ ಸಂಖ್ಯೆ: 8147685479 ಗೆ ಸಂಪರ್ಕಿಸಬಹುದು, ಎಂದು, ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ
ಬೆಳಗಾವಿ, ಜು.10 : ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ” ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು “ಜುಲೈ-2023” ರಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ ಮಾಡಲಾಗುವುದು.
ಪಡಿತರ ವಿತರಣೆ ಹಾಗೂ ನೇರ ನಗದು ವರ್ಗಾವಣೆ ವಿವರ:
ಅಂತ್ಯೋದಯ (ಎಎವೈ) ಓಈSಂ ಪ್ರತಿ ಪಡಿತರ ಚೀಟಿಗೆ ಅಕ್ಕಿ-35 ಕೆ.ಜಿ. ಉಚಿತ, ಪಿ.ಎಚ್.ಎಚ್ (ಬಿಪಿಎಲ್) (ಆದ್ಯತಾ) ಓಈSಂ ಪ್ರತಿ ಸದಸ್ಯರಿಗೆ ಅಕ್ಕಿ-05 ಕೆ.ಜಿ. ಉಚಿತ, ಎನ್‍ಪಿಹೆಚ್‍ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ) – ಏಕ ಸದಸ್ಯ ಪಡಿತರ ಚೀಟಿಗೆ ಅಕ್ಕಿ-05 ಕೆ.ಜಿ, 2 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ ಅಕ್ಕಿ-10 ಕೆ.ಜಿ. ಪ್ರತಿ ಕೆ.ಜಿ.ಗೆ ರೂ.15/- ಇರಲಿದೆ.
(Portability)ಅಂತರ್‍ರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯವವರಿಗೆ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ 5 ಕೆ.ಜಿ ಪ್ರತಿ ಸದಸ್ಯರಿಗೆ ಉಚಿತವಾಗಿರುತ್ತದೆ.
ಜುಲೈ-2023ನೇ ಮಾಹೆಯ ಅಂತ್ಯದೊಳಗೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಜಿಲ್ಲೆಯ ಅಂತ್ಯೋದಯ ಮತ್ತು ಆದ್ಯತಾ(ಬಿ.ಪಿ.ಎಲ್) ಪಡಿತರ ಚೀಟಿದಾರರಿಗೆ ಹೊಸ ಸರಕಾರ ಘೊಷಿಸಿದ ಗ್ಯಾರಂಟಿ ಯೋಜನೆಯಡಿ 05ಕೆ.ಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿ ಗೆ ರೂ.34/-ರಂತೆ ನೇರವಾಗಿ ಸಂಬಂದಪಟ್ಟ ಫಲಾನುಬವಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು. ಇದಕ್ಕೆ ಸಂಬಂದಿಸಿದಂತೆ ಪಡಿತರ ಚೀಟಿಯಲ್ಲಿರುವ ಕುಟುಂಬ ಮುಖ್ಯಸ್ಥರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ ಅಥವಾ ಪೋಸ್ಟ ಆಫೀಸಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರತಕ್ಕದ್ದು ಹಾಗೂ ಸದರ ಉಳಿತಾಯ ಖಾತೆ ಇ-ಕೆ.ವೈ.ಸಿ ಮಾಡಿಕೊಂಡಿರತಕ್ಕದ್ದು, ಅಲ್ಲದೆ ಕಳೆದ ಮೂರು ತಿಂಗಳಿನಿಂದ ಸತತವಾಗಿ ಪಡಿತರ ಪಡೆದಿರತಕ್ಕದ್ದು ಅಂತಹ ಫಲಾನುಬವಿಗಳಿಗೆ ಡಿ.ಬಿ.ಟಿ ಮೂಲಕ ಇಲಾಖೆಯಿಂದ ಹಣ ವರ್ಗಾವಣೆ ಮಾಡಲಾಗುವುದು.
ಜಿಲ್ಲೆಯಲ್ಲಿ 68,636 ಅಂತ್ಯೋದಯ, 10,80,880 ಬಿಪಿಎಲ್ ಹಾಗೂ 3,21,237 ಎಪಿಎಲ್ ಪಡಿತರ ಚೀಟಿಗಳು ಸೇರಿ ಒಟ್ಟು 14,70,753 ಪಡಿತರ ಚೀಟಿಗಳು ಚಾಲ್ತಿಯಲ್ಲಿರುತ್ತವೆ.
ಜುಲೈ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಯಡಿ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬಹುದು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರಿಗೆ ಈ ಮಾಹೆ ಅಂತಿಮ ಗಡುವು ನೀಡಲಾಗಿರುತ್ತದೆ.
ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು. ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಜರುಗಿಸಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ ಕಚೇರಿ ಅಥವಾ ಜಂಟಿ ನಿರ್ದೇಶಕರ ಕಚೇರಿ ಆಹಾರ ಇಲಾಖೆ ಇವರಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ ವಿಶೇಷ ದಾಖಲಾತಿ
ಬೆಳಗಾವಿ, ಜು.10 : ಕ್ರೈಸ್ ಶಾಲೆಯ ವತಿಯಿಂದ ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ ಕ್ರೈಸ್ ವಸತಿ ಶಾಲೆಯ 2023-24ನೇ ಸಾಲಿನ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಸದರಿ ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮಕ್ಕಳಿಗೆ ಪೋಷಕರು ತಮ್ಮ 6ನೇ ತರಗತಿ ಮಕ್ಕಳಿಗೆ ಹತ್ತಿರದ ಕ್ರೈಸ್ ವಸತಿ ಶಾಲೆಗಳಲ್ಲಿ ನೇರವಾಗಿ ಪ್ರವೇಶ ಪಡೆಯಬಹುದು. ಆಸಕ್ತರು ಅರ್ಜಿಗಳನ್ನು ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//
ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯಗಾರ
ಬೆಳಗಾವಿ, ಜು.10 : ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಬೆಳಗಾವಿ ಅನುಷ್ಠಾನ ಬೆಂಬಲ ಸಂಸ್ಥೆಯಯವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬೆಳಗಾವಿ ಅವರ ಆದೇಶದ ಮೇರೆಗೆ ಕಿತ್ತೂರ್ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಕಾರ್ಯಾಚರಣೆ ಮತ್ತು ನಿರ್ವಹಣೆ, ನೀರಿನ ಗುಣಮಟ್ಟ ಪರೀಕ್ಷೆಯ ತರಬೇತಿಯನ್ನು ಏರ್ಪಡಿಸಲಾಯಿತು.
ಕಾರ್ಯಗಾರದ ಅಧ್ಯಕ್ಷರ ಸ್ಥಾನವನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರವೀಣ ಮಠಪತಿ ಅವರು ವಹಿಸಿದ್ದರು.
ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕರು ಂಆ (Pಖ), ನರೇಗಾ ಕಿತ್ತೂರು ಸಹಾಯಕ ನಿರ್ದೇಶಕರು, ತಾಲೂಕ ಪಂಚಾಯಿತಿಯ ಲೆಕ್ಕಾಧಿಕಾರಿಗಳು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಾಟರ್ ಮ್ಯಾನ್‍ಗಳು ಮತ್ತು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಿಬ್ಬಂದಿಗಳು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಹಾಗೂ ISಂ & ISಖಂ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಗಾರವನ್ನು ಯಶಸ್ವಿಗೋಳಿಸಿದರು.
ಜವಾಹರ್ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬೆಳಗಾವಿ, ಜು.10 : ಜವಾಹರ್ ನವೋದಯ ವಿದ್ಯಾಲಯಗಳಲ್ಲಿ 2024-25 ನೇ ಸಾಲಿಗೆ ಗಿI ನೇ ತರಗತಿಗೆ ಆಯ್ಕೆ ಪರೀಕ್ಷೆ (ಎಓಗಿSಖಿ) ಮೂಲಕ ಪ್ರವೇಶಕ್ಕಾಗಿ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಗಸ್ಟ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನವೆಂಬರ್ 4, 2023(ಚಳಿಗಾಲ-ಜೆಎನ್‍ವಿ), ಹಾಗೂ ಜನವರಿ.20 2024(ಬೇಸಿಗೆ-ಜೆಎನ್‍ವಿ) ರಂದು ಪರಿಕ್ಷೆ ನಡೆಯಲಿವೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಅಭ್ಯರ್ಥಿಗಳು 2023-24 ರ ಶೈಕ್ಷಣಿಕ ಅವಧಿಯಲ್ಲಿ ಸರ್ಕಾರಿ/ಸರ್ಕಾರೇತರ ಶಾಲೆಗಳಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ ಜಿಲ್ಲೆಯ ಪ್ರಮಾಣಿಕ ನಿವಾಸಿಗಳಾಗಿರಬೇಕು.
ಪ್ರವೇಶವನ್ನು ಬಯಸುವ ಅಭ್ಯರ್ಥಿಗಳು ಎಓಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಾನ್ಯತೆ ಪಡೆದ ಶಾಲೆಯವರಾಗಿರಬೇಕು.
ಪ್ರತಿ ತರಗತಿಯಲ್ಲಿ ಪೂರ್ಣ ಶೈಕ್ಷಣಿಕ ಅವಧಿಯನ್ನು ಅಧ್ಯಯನ ಮಾಡಿರಬೇಕು ಮತ್ತು ಸರ್ಕಾರಿ ಅಥವಾ ಸರ್ಕಾರೇತರ ಶಾಲೆಗಳಿಂದ III ಮತ್ತು Iಗಿ ತರಗತಿಗಳಲ್ಲಿ ಉತ್ತೀರ್ಣರಾಗಿರಬೇಕು. ಮೇ 01, 2012 ರಿಂದ ಜುಲೈ 31, 2014 ರೊಳಗೆ ಜನಿಸಿದವರಾಗಿರಬೇಕು.
ಮೀಸಲಾತಿ:
ಜಿಲ್ಲೆಯಲ್ಲಿ ಕನಿಷ್ಠ 75% ಸೀಟುಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿರುತ್ತವೆ. ಭಾರತ ಸರ್ಕಾರದ ಮೀಸಲಾತಿ ನಿಯಮಾವಳಿಗಳ ಪ್ರಕಾರ Sಅ.Sಖಿ.ಔಃಅ ಮತ್ತು ದಿವ್ಯಾಂಗದವರಿಗೆ ಮೀಸಲಾತಿ ಇರುತ್ತದೆ. ಕನಿಷ್ಠ 1/3 ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಿತಿತಿ.ಟಿಚಿvoಜಚಿಥಿಚಿ.gov.iಟಿ ಗೆ ಭೇಟಿ ನೀಡಬಹುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಜನಸಂಖ್ಯೆ ಸ್ಥಿರೀಕರಣ ಪಾಕ್ಷಿಕ: ಜುಲೈ 11 ರಿಂದ
ಬೆಳಗಾವಿ, ಜು.10 : ವಿಶ್ವ ಜನಸಂಖ್ಯಾ ದಿನವು ಇತಿಹಾಸದ ಮಹತ್ವ ದಿನಗಳಲ್ಲಿ ಒಂದಾಗಿದ್ದು, ಭಾರತದ ಜನಸಂಖ್ಯೆಯನ್ನು ತಡೆಗಟ್ಟಲು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಿ ಸ್ಥಿರೀಕರಣವನ್ನು ಗುರುತಿಸುವ ಕನಸನ್ನು ಹೊಂದಿದೆ. ಕಳೆದ 13 ವರ್ಷಗಳಿಂದ ದೇಶಾದ್ಯಂತ ಪ್ರತಿ ವರ್ಷ ಒಂದು ತಿಂಗಳ ಅಭಿಯಾನವನ್ನು ಆಚರಿಸಲು ನಿರ್ಧರಿಸಲಾಗಿದ್ದು, ಅದರಂತೆ ಈ ವರ್ಷವು ಸಹ ಆಚರಿಸಲು ತೀರ್ಮಾನಿಸಲಾಗಿದೆ.
ಸಮುದಾಯ ಜಾಗೃತೀಕರಣ ಪಾಕ್ಷಿಕ (ದಂಪತಿ ಸಂರ್ಪಕ ಪಾಕ್ಷಿಕ) ಜೂನ್ 27 ರಿಂದ ಜುಲೈ 10ರ ವರೆಗೆ ಹಾಗೂ ಜನಸಂಖ್ಯೆ ಸ್ಥಿರೀಕರಣ ಪಾಕ್ಷಿಕ: ಜುಲೈ 11 ರಿಂದ ಜುಲೈ 24ರ ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಘೋಷವಾಕ್ಯ “ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಪ್ರತಿಜ್ಞೆಯನ್ನು ಮಾಡೋಣ” ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ವಿಶ್ವದ ಜನಸಂಖ್ಯೆಯು 500 ಕೋಟಿ ತಲುಪಿದ ದಿನ 1987ರ ಜುಲೈ-11ನೇ ದಿನಾಂಕದಿಂದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನಸಂಖ್ಯಾ ಸ್ಥಿರೀಕರಣವು ದೇಶದ ಅಭಿವೃದ್ದಿಗೆ ಸಹಾಯಕವಾಗುತ್ತಿದೆ. ಹೆಚ್ಚು ಬೆಳೆಯುತ್ತಿರುವ ಜನಸಂಖ್ಯೆಯು ಜಾಗತಿಕ ಸಮಸ್ಯಗಳಿಗೆ ನಿರ್ಣಾಯಕ ವಿಷಯವಾಗಿದೆ. ಜನಸಂಖ್ಯೆಯಿಂದ ಸಂಪನ್ಮೂಲಗಳು ಸಮರ್ಥನೀಯವಲ್ಲದ ರೀತಿಯಲ್ಲಿ ಖಾಲಿಯಾಗುತ್ತಿವೆ. ಇದರಿಂದ ಪ್ರಕೃತಿಯ ಮೇಲೆ ಪರಿಣಾಮವನ್ನು ಬೀರಿ ಭೂಗೋಳಕ್ಕೆ ತೊಂದರೆಯಾಗಿ ವಾತಾವಾರಣದ ಕಾಲಘಟ್ಟಗಳು ಬದಲಾಗುತ್ತಿವೆ. ಮಳೆ ಬೆಳೆಯಲ್ಲಿ ಬದಲಾವಣೆ ಜೀವಹಾನಿ ಹಾಗೂ ರೋಗರುಜಿಗಳು ಹೆಚ್ಚಾಗುವದು ಕಂಡುಬರುತ್ತೀವೆ. ಜನಸಂಖ್ಯೆ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ನೀಡಲಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಮಹಿಳೆಯರು ಎದುರುಸುತ್ತಿರುವ ಆರೋಗ್ಯ ಸಮಸ್ಯಗಳನ್ನು ಎದುರಿಸಲು ಕುಟುಂಬ ಯೋಜನೆ ಲಿಂಗ ಸಮಾನತೆ, ತಾಯಿ ಆರೋಗ್ಯವನ್ನು ನಿಭಾಯಿಸಲು ಜಿಲ್ಲೆಯಲ್ಲಿ 616 ಉಪಕೇಂದ್ರಗಳು, 139 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 16 ಸಮುದಾಯ ಆರೋಗ್ಯ ಕೇಂದ್ರಗಳು, 9 ಸಾರ್ವಜನಿಕ ಆಸ್ಪತ್ರೆ, 1 ಜಿಲ್ಲಾ ಆಸ್ಪತ್ರೆ ಹಾಗೂ ವಿಶೇಷವಾಗಿ 5 ತಾಯಿ ಮಕ್ಕಳ ಆಸ್ಪತ್ರೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸಮುದಾಯ ಜಾಗೃತೀಕರಣ ಪಾಕ್ಷಿಕದಲ್ಲಿ ಸಮುದಾಯಕ್ಕೆ ಕುಟುಂಬ ಯೋಜನೆಗಳ ಮಹತ್ವ ಜನಸಂಖ್ಯೆಯಿಂದಾಗುವ ಪರಿಣಾಮಗಳ ಕುರಿತು ಆರೋಗ್ಯ ಶಿಕ್ಷಣವನ್ನು ಗ್ರಾಮ ಮಟ್ಟದಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆಯ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂಧಿಗಳಿಂದ ತಾಯಿಂದಿರ ಸಭೆ ಗುಂಪು ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಹಾಗೂ ಜಾಥಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮದುವೆ ವಯಸ್ಸು, ಮಕ್ಕಳ ಜನನದ ನಡುವಿನ ಅಂತರ, ಕುಟುಂಬ ಯೋಜನೆಯ ವಿಧಾನಗಳು ಮತ್ತು ಬಳಕೆ ಹಾಗೂ ಕುಟುಂಬ ಯೋಜನೆಗಳಲ್ಲಿ ಪುರುಷರ ಸಹಬಾಗಿತ್ವವನ್ನು ಹೆಚ್ಚಿಸುವದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕದಲ್ಲಿ ಅರ್ಹ ಫಲಾನುಭವಿಗಳಿಗೆ ಕುಟುಂಬ ಯೋಜನೆಯ ವಿಧಾನಗಳ ಆಯ್ಕೆ ಬಗ್ಗೆ ಸಮಾಲೋಚನೆಯನ್ನು ನಡೆಸಿ ಕುಟುಂಬ ಯೋಜನೆಯ ವಿಧಾನಗಳ ಆಯ್ಕೆಗಳ ಸ್ವಾತಂತ್ರ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಅವರಿಗೆ ಬೇಕಾದ ಸೇವಾ ಸೌಲಭ್ಯಗಳನ್ನು ಮುಟ್ಟಿಸಲಾಗುವುದು. ಗರ್ಭನಿರೋಧಕಗಳಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಎರಡು ವಿಧಾನಗಳಿದ್ದು ಫಲಾನುಭವಿಯು ಇಚ್ಚಿಸಿದ ಸೇವೆಯನ್ನು ನೀಡಲಾಗುತ್ತಿದೆ. ತಾತ್ಕಾಲಿಕ ವಿಧಾನದಲ್ಲಿ ಪುರುಷರಿಗೆ ನಿರೋದ್, ಸ್ತ್ರಿಯರಿಗಾಗಿ ಗರ್ಭನಿರೋಧಕ ನುಂಗುವ ಗುಳಿಗೆಗಳು, ಮಾಲಾ-ಎನ್ ಮಾತ್ರೆಗಳು, ಛಾಯಾ ಮಾತ್ರೆ ಮತ್ತು ತುರ್ತು ಗರ್ಭನಿರೋಧಕ ಮಾತ್ರೆಗಳು ಹಾಗೂ ಅಂತರ ಇಂಜಿಕ್ಷಣ ನೀಡಲಾಗುತ್ತಿದೆ. ಅದರಂತೆ ಶಾಶ್ವತ ವಿಧಾನಗಳಲ್ಲಿ ಪುರುಷರಿಗೆ ಕುಟುಂಬ ಯೋಜನೆಯಲ್ಲಿ ಪುರುಷರ ಪಾಲ್ಗೋಳ್ಳುವಿಕೆಯನ್ನು ಹೆಚ್ಚಿಸಲು ಸುಲಭ, ಗಾಯವಿಲ್ಲದ, ಹೊಲಿಗೆ ಇಲ್ಲದ ಮತ್ತು ಸರಳ ವಿಧಾನವಾಗಿ ಪುರುಷ ಸಂತಾನ ನಿರೋಧಕ (ಎನ್.ಎಸ್.ವ್ಹಿ) ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಅದರಂತೆ ಸ್ತ್ರೀಯರಿಗೆ ಎರಡು ವಿಧಾನಗಳ ಮೂಲಕ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡಿಸಿಕೊಳ್ಳಲು ವಿನಂತಿಸಿದೆ.
2022-23ನೇ ಸಾಲಿನಲ್ಲಿ ಜನಸಂಖ್ಯಾ ನಿಯಂತ್ರಣದಡಿಯಲ್ಲಿ 42325 ಫಲಾನುಭವಿಗಳಿಗೆ ಗರ್ಭನಿರೋಧಕ “ಮಾಲಾ” ನುಂಗವ ಮಾತ್ರೆಗಳನ್ನು, 63485 ಫಲಾನುಭವಿಗಳಿಗೆ “ನಿರೋಧ”ನ್ನು ನೀಡಲಾಗಿದೆ. 4664 ಫಲಾನುಭವಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ “380 ಮತ್ತು 375 ವಂಕಿಧಾರಣೆ” ಮಾಡಲಾಗಿದೆ. ಹೆರಿಗೆ ಆದ ಸ್ಥಳದಲ್ಲಿ ಅಳವಡಿಸುವ “ಪಿ.ಪಿ.ಐ.ಯು.ಸಿ.ಡಿ” ಯನ್ನು 8004 ಫಲಾನುಭವಿಗಳಿಗೆ ಅಳವಡಿಸಲಾಗಿದೆ. 4369 ಫಲಾನುಭವಿಗಳಿಗೆ ತುರ್ತು ಗರ್ಭನಿರೋಧಕ ನುಂಗವ ಮಾತ್ರೆ “ಇ.ಸಿ.ಪಿ”ಗಳನ್ನು ನೀಡಲಾಗಿದೆ. 8462 ಫಲಾನುಭವಿಗಳಿಗೆ ನೂತನ ಗರ್ಭನಿರೋಧಕ ಮಾತ್ರೆ “ಛಾಯಾ” ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಗರ್ಭ ನಿರೋಧಕ ಚುಚ್ಚುಮದ್ದು “ಅಂತರ” ನೀಡಲಾಗಿದೆ. ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ 6555 ಫಲಾನುಭವಿಗಳಿಗೆ ಲೇಪ್ರೋಸ್ಕೋಪಿ ಶಾಶ್ವತ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. 7259 ಫಲಾನುಭವಿಗಳಿಗೆ ಜಿಲ್ಲೆಯ ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಮಿನಿಲ್ಯಾಪ್ ಶಾಶ್ವತ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಹಾಗೂ ನುರಿತ ತಜ್ಞ ವೈದ್ಯರ 102 ಫಲಾನುಭವಿಗಳಿಗೆ ಪುರುಷ ಸಂತಾನ ನಿರೋಧಕ(ಎನ್.ಎಸ್.ವ್ಹಿ) ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.
2023-24ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳು ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಮದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///