ತಂಗಿ ಎಲ್ಲೆ ಇದ್ದರೂ ಬೇಗ ಬಾ ಅಣ್ಣ ಮನೆಯಲ್ಲಿ ಗೋಳಾಡುತ್ತಿರಯವ ದೃಶ್ಯ

ಹಾಸನ: ನಮ್ಮನ್ನು ಹೆತ್ತು, ಹೊತ್ತು ಸಾಕು ಸಲುಹಿದ ತಾಯಿ ನಿನ್ನೆ ರಾತ್ರಿ ವೇಳೆ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಆದರೆ, ಮನೆ ಬಿಟ್ಟು ಹೋಗಿರುವ ಸಹೋದರಿಗೆ ನೀನು ಎಲ್ಲೇ ಇದ್ದರೂ ತಾಯಿಯ ಮೃತದೇಹವನ್ನು ನೋಡಲು ತವರಿಗೆ ಬಾ ತಂಗಿ ಎಂದು ಎಂದು ಅಣ್ಣ ಮನೆಯಲ್ಲಿ ಗೋಳಾಡುತ್ತಿರಯವ ದೃಶ್ಯ ಮನಕಲಕುವಂತಿದೆ..
ಮನೆಯಲ್ಲಿ ಕಡುಬಡತನ, ದೇಹದಲ್ಲಿ ಅನಾರೋಗ್ಯ, ಸಣ್ಣ ಪುಟ್ಟ ದುಡಿಮೆ ಮಾಡಿಕೊಂಡು ನಬ್ಬಿರನ್ನು ಸಾಕಿ ಬೆಳೆಸಿದ ತಾಯಿ ಈಗ ಸಾವನ್ನಪ್ಪಿದ್ದಾಳೆ. ನಿನ್ನನ್ನು ಎತ್ತಿ ಆಡಿಸಿ, ಬೆಳೆಸಿದ ತಾಯಿ ಈಗ ನಮ್ಮನ್ನು ಅಗಲಿದ್ದಾಳೆ..
ಆದರೆ, ನೀನು ಮನೆಯನ್ನು ಬಿಟ್ಟು ಹೋಗಿದ್ದು, ಎಲ್ಲಿಯೇ ಇದ್ದರೂ ಕೊನೇ ಬಾರಿಗೆ ತಾಯಿ ಮುಖವನ್ನಾದರೂ ನೊಡಲು ಬರುವಂತೆ ಆಕೆಯ ಅಣ್ಣ ತಂಗಿಗೆ ಮನವಿ ಮಾಡಿದ್ದಾನೆ. ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. .