ಡಿಕೆಶಿಯನ್ನು ಹಾಡಿಹೊಗಳಿದ ಮಾಜಿ ಮುಖ್ಯಮಂತ್ರಿ

ಬೆಂಗಳೂರು: ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮಗೆ ಸಿಕ್ಕಿರುವ ಎಲ್ಲಾ ಕುದುರೆಗಳನ್ನು ಯಶಸ್ವಿಯಾಗಿ ಏರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದಾರೆ. ನೂತನ ಉಪಸಭಾಪತಿ ಆಯ್ಕೆ ಬಳಿಕ ಮಾತನಾಡಿದ ಬೊಮ್ಮಾಯಿ, ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ..
ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ಧೀರನೂ ಅಲ್ಲವೆಂದು ಹೇಳಲಾಗುತ್ತದೆ. ಆದರೆ, ಡಿಕೆ ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲ ಯಶಸ್ವಿಯಾಗಿಯೇ ಏರಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದ್ದಾರೆ.
ಶಿವಕುಮಾರ್ ಅವರಿಗೆ ಇನ್ನು ಮುಂದೆ ಯಾವ ಕುದುರೆ ಸಿಗುತ್ತದೆ ಎಂದು ಕಾದು ನೋಡೋಣ. ಮೊದಲು ಅವರು ಪವರ್ ಮಿನಿಸ್ಟರ್ ಆದರು. ಪವರ್ ಖಾತೆ ಜೊತೆಗೆ ಪವರ್ ಪೊಲಿಟಿಕ್ಸ್ ಅನ್ನೂ ಮಾಡಿದರು ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು..
ರಾಜಕೀಯದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು. ನಮಗೆ ಯಾರೂ ಪವರ್ ಅನ್ನು ಕೊಡಲ್ಲ. ನಾವು ಅದನ್ನು ಕಿತ್ತುಕೊಳ್ಳಬೇಕು. ಅದನ್ನು ಡಿಕೆಶಿ ಚೆನ್ನಾಗಿ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.